ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಆಲಗೂರ ಗ್ರಾಮದ ಮಹಾವೀರ ಅಲ್ಪಸಂಖ್ಯಾತರ ಶಾಲೆಯಲ್ಲಿ ನಡೆದ 2026–27ನೇ ಸಾಲಿನ 14 ವರ್ಷ ವಯೋಮಿತಿ ಒಳಗಿನ ಹಿರೇಪಡಸಲಗಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಾಗನೂರಿನ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರು ವಾಲಿಬಾಲ್ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
ಆರಂಭದಿಂದಲೇ ಉತ್ತಮ ಸಂಘಟಿತ ಆಟ ಪ್ರದರ್ಶಿಸಿದ ತಂಡ, ಎದುರಾಳಿ ತಂಡಗಳ ವಿರುದ್ಧ ಆತ್ಮವಿಶ್ವಾಸದಿಂದ ಸೆಣಸಾಡಿ ಅಂತಿಮವಾಗಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ತಂಡದ ನಾಯಕ ಸಮರ್ಥ ಗಲಗಲಿ ಅವರ ನಾಯಕತ್ವದಲ್ಲಿ ಸಿದ್ದಾರ್ಥ ಕಂಬಾರ, ಸಮರ್ಥ ಕಂಬಾರ, ಸಂತೋಷ ಕಂಬಾರ, ನಿಂಗಪ್ಪ ಹಿರೇಕುರಬರ ಹಾಗೂ ಸಾಬು ಕವಟೆಕರ ಉತ್ತಮ ಆಟ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ವಿಜೇತ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು, ಮುಖ್ಯಗುರುಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹಿರಿಯ ದೈಹಿಕ ಶಿಕ್ಷಕ ಬಿ.ಜಿ. ಅನಂತಪೂರ, ಮುಖ್ಯಗುರು ಬಿ.ಪಿ. ಬಡಿಗೇರ, ಆರ್.ಆರ್. ಕುಲಕರ್ಣಿ, ಲಿಗಾಡಿ ಗುರುಗಳು, ರಾಜು ತೇಲಿ, ಪ್ರವೀಣ ನಾವಿ, ಸಾಬು ಜಂಬಗಿ, ಶಿಕ್ಷಕಿಯರಾದ ಪಿ.ವಿ. ಮಾಳಿ, ಜೆ.ಎಚ್. ಕಡಕೋಳ, ಆರ್. ಆರ್ ಪೂಜಾರಿ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

