ಉದಯರಶ್ಮಿ ದಿನಪತ್ರಿಕೆ
ಕಲಬುರ್ಗಿ: ಜಿಲ್ಲೆಯ ಯಡ್ರಾಮಿ ಪಟ್ಟಣದ ಶ್ರೀ ಮುರುಗೇಂದ್ರ ಶಿವಯೋಗಿ ವಿರಕ್ತಮಠವು
ಪ್ರತಿ ವರ್ಷದಂತೆ ಈ ವರ್ಷವು, ಶ್ರಾವಣ ಮಾಸದ ಪ್ರದಕ್ಷಿಣೆ ಭಜನಾ ಕಾರ್ಯಕ್ರಮವು ಒಂದು ತಿಂಗಳು ಪರ್ಯಂತರ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿದ್ದು.ಇದರ ಮುಕ್ತಾಯವು ದಿ||12 ಮತ್ತು 13ನೇಸೆಪ್ಟಂಬರ ರವಿವಾರದಂದು ನಡೆಯಲಿದೆ.
ದಿನಾಂಕ 12 ರ ಸೆಪ್ಟೆಂಬರ್ ಶನಿವಾರ ಬೆಳಿಗ್ಗೆ 6 ಗಂಟೆಗೆ ಸಪ್ತಾಹ ಭಜನೆ ಪ್ರಾರಂಭವಾಗಿ 13ರ ರವಿವಾರ ಬೆಳಗಿನ ವರೆಗೆ ಜರಗುವದು ನಂತರ ಶ್ರೀ ಮುರುಘೇಂದ್ರ ಶಿವಯೋಗಿ ಕರ್ತೃ ಗದ್ದಿಗೆಗೆ ರುದ್ರಾಭೀಷೇಕ,ನೆರವೇರಿದ
ಬಳಿಕ, ಲೋಕ ಕಲ್ಯಾಣಕ್ಕಾಗಿ ಶ್ರೀ ಮಠದ ಪೀಠಾದ್ಯಕ್ಷರಾದ ಶ್ರೀ. ಮ.ನಿ.ಪ್ರ.ಸಿದ್ದಲಿಂಗ ಮಹಾಸ್ವಾಮಿಗಳು ಶ್ರಾವಣ ಮಾಸದಿ ಒಂದು ಮಾಸ ಪೂರ್ಣ ಕೈಗೊಂಡಿದ್ದ ಮೌನ ಅನುಷ್ಠಾನವು, ಸಮಾಪ್ತಿಯಾಗಲಿದೆ, ಹಾಗು ಭಜನೆಯ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಮರಳಿ ಶ್ರೀ ಮಠಕ್ಕೆ ತಲುಪುವದು, ಶ್ರೀಗಳ ಆಶಿರ್ವಚನ ತದನಂತರ ರಥೋತ್ಸವ ಜರಗಿದ ತರುವಾಯ ಮಹಾ ಪ್ರಸಾದದೊಂದಿದೆ ಮಂಗಲಗೊಳ್ಳುವದು ಆದಕಾರಣ ಭಕ್ತಾದಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಮುರುಗೇಂದ್ರ ಶಿವಯೋಗಿಗಳ ಮತ್ತು, ಶ್ರೀ ಸಿದ್ದರಾಮ ಶಿವಯೋಗಿಗಳವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಮಠವು ಪ್ರಕಟಣೆಯಲ್ಲಿ ತಿಳಿಸಿದೆ.

