Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬಾಲಪ್ರತಿಭೆ ಶಿವಾನಿಯಿಂದ ವೃಕ್ಷಥಾನ್ ಹೆರಿಟೇಜ್ ರನ್ ಗೆ ದೇಣಿಗೆ

ಕೃಷ್ಣಾ ನದಿಯಲ್ಲಿ ತೆಪ್ಪಗಳ ಸೆಣಸಾಟಕ್ಕೆ ವೇದಿಕೆ ಸಜ್ಜು!

ಕೊಲ್ಹಾರದಲ್ಲಿ ಅ.20ರಂದು ಪುರಾಣ ಮಹಾಮಂಗಲ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕೃಷ್ಣಾ ನದಿಯಲ್ಲಿ ತೆಪ್ಪಗಳ ಸೆಣಸಾಟಕ್ಕೆ ವೇದಿಕೆ ಸಜ್ಜು!
(ರಾಜ್ಯ ) ಜಿಲ್ಲೆ

ಕೃಷ್ಣಾ ನದಿಯಲ್ಲಿ ತೆಪ್ಪಗಳ ಸೆಣಸಾಟಕ್ಕೆ ವೇದಿಕೆ ಸಜ್ಜು!

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕೃಷ್ಣಾ ನದಿಯಲ್ಲಿ ಮೂರು ಕಿ.ಮೀ. ತೆಪ್ಪ ಸ್ಪರ್ಧೆ | ವಿಜೇತರಿಗೆ ಆಕರ್ಷಕ ನಗದು ಬಹುಮಾನ | ಅ.22ರಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಗೃಹಕಚೇರಿಯಲ್ಲಿ ಸ್ನೇಹ ಸಮ್ಮಿಲನ

ಉದಯರಶ್ಮಿ ದಿನಪತ್ರಿಕೆ

ಕೊಲ್ಹಾರ: ವಿಜಯದಶಮಿ ಹಬ್ಬದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಪಟ್ಟಣದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ಗೃಹಕಚೇರಿಯಲ್ಲಿ ಅಕ್ಟೋಬರ್ 22ರಂದು ಗುರುವಾರ ಸ್ನೇಹ ಸಮ್ಮಿಲನ ಹಾಗೂ ಬನ್ನಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದೇ ಸಂದರ್ಭದಲ್ಲಿ ಕೃಷ್ಣಾ ನದಿಯಲ್ಲಿ ಅವಳಿ ಜಿಲ್ಲೆಯ ಮೀನುಗಾರರಿಗಾಗಿ ವಿಶೇಷ ತೆಪ್ಪ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಯುವ ಮುಖಂಡರಾದ ಚಂದ್ರಶೇಖರ ಬೆಳ್ಳುಬ್ಬಿ ಹಾಗೂ ಜಗದೀಶ ಸುನಗದ ತಿಳಿಸಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಜಯದಶಮಿ ಹಬ್ಬವು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಬಾಂಧವ್ಯ ವೃದ್ಧಿಸುವ ಸಂಕೇತವಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 8 ಗಂಟೆಯಿಂದ ಸಂಜೆಯವರೆಗೆ ವಿಜಯಪುರ–ಬಾಗಲಕೋಟೆ ಅವಳಿ ಜಿಲ್ಲೆಗಳು ಹಾಗೂ ಬಸವನ ಬಾಗೇವಾಡಿ ಮತಕ್ಷೇತ್ರದ ಸಾರ್ವಜನಿಕರು, ಮುಖಂಡರು, ಅಭಿಮಾನಿಗಳು ಪರಸ್ಪರ ಭೇಟಿಯಾಗಿ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಕೃಷ್ಣಾ ನದಿಯಲ್ಲಿ ರೋಚಕ ತೆಪ್ಪ ಸ್ಪರ್ಧೆ:
ವಿಜಯದಶಮಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ಉದ್ದೇಶದಿಂದ ಅಂದು ಬೆಳಗ್ಗೆ 10 ಗಂಟೆಗೆ ಕೊಲ್ಹಾರ–ಕೋರ್ತಿ ಸೇತುವೆ ಸಮೀಪದ ಕೃಷ್ಣಾ ನದಿಯಲ್ಲಿ ಮೀನುಗಾರರ ತೆಪ್ಪ ಸ್ಪರ್ಧೆ ಏರ್ಪಡಿಸಲಾಗಿದೆ.
ಟಕ್ಕಳಕಿ ಗ್ರಾಮದ ನದಿದಡದಿಂದ ಕೊಲ್ಹಾರ ಭಾಗದವರೆಗೆ ಸುಮಾರು ಮೂರು ಕಿ.ಮೀ. ದೂರದ ಸ್ಪರ್ಧೆಯಲ್ಲಿ ಪ್ರತಿ ತಂಡದ ಇಬ್ಬರು ಮೀನುಗಾರರು ಸಾಂಪ್ರದಾಯಿಕ ಬುಟ್ಟಿ ತೆಪ್ಪದಲ್ಲಿ ಕುಳಿತು ಹುಟ್ಟು ಹಾಕುತ್ತಾ ನಿಗದಿತ ಗುರಿ ತಲುಪಬೇಕಾಗಿದೆ. ಮೊದಲು ದಡ ಸೇರುವ ತಂಡಗಳ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುವುದು ಎಂದು ವಿವರಿಸಿದ್ದಾರೆ.
ಮೀನುಗಾರರ ತೆಪ್ಪ ಸ್ಪರ್ಧೆ
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ₹15,000, ದ್ವಿತೀಯ ಸ್ಥಾನಕ್ಕೆ ₹10,000, ತೃತೀಯ ಸ್ಥಾನಕ್ಕೆ ₹7,500 ಹಾಗೂ ಚತುರ್ಥ ಸ್ಥಾನಕ್ಕೆ ₹5,000 ನಗದು ಬಹುಮಾನ ನೀಡಲಾಗುವುದು. ಉಳಿದಂತೆ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ತಂಡಗಳಿಗೂ ಸಮಾಧಾನಕರ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಮೀನುಗಾರರ ಸಾಂಪ್ರದಾಯಿಕ ಕೌಶಲ, ಸಾಹಸ ಹಾಗೂ ಸ್ಪರ್ಧಾತ್ಮಕ ಮನೋಭಾವಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿದೆ. ಅವಳಿ ಜಿಲ್ಲೆಯ ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕು. ಸಾರ್ವಜನಿಕರು ವಿಜಯದಶಮಿ ಸ್ನೇಹ ಸಮ್ಮಿಲನದಲ್ಲಿ ಪಾಲ್ಗೊಂಡು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಹಬ್ಬದ ಸಂಭ್ರಮವನ್ನು ಹೆಚ್ಚಿಸಬೇಕು ಎಂದು ಚಂದ್ರಶೇಖರ ಬೆಳ್ಳುಬ್ಬಿ ಹಾಗೂ ಜಗದೀಶ ಸುನಗದ ಮನವಿ ಮಾಡಿದ್ದಾರೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬಾಲಪ್ರತಿಭೆ ಶಿವಾನಿಯಿಂದ ವೃಕ್ಷಥಾನ್ ಹೆರಿಟೇಜ್ ರನ್ ಗೆ ದೇಣಿಗೆ

ಕೊಲ್ಹಾರದಲ್ಲಿ ಅ.20ರಂದು ಪುರಾಣ ಮಹಾಮಂಗಲ

ಅ.೨೨ ರಂದು ಬನ್ನಿ ವಿನಿಮಯ ಕಾರ್ಯಕ್ರಮ

ಬನ್ನಿ ವಿನಿಮಯ ಕಾರ್ಯಕ್ರಮ ಇರುವುದಿಲ್ಲ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬಾಲಪ್ರತಿಭೆ ಶಿವಾನಿಯಿಂದ ವೃಕ್ಷಥಾನ್ ಹೆರಿಟೇಜ್ ರನ್ ಗೆ ದೇಣಿಗೆ
    In (ರಾಜ್ಯ ) ಜಿಲ್ಲೆ
  • ಕೃಷ್ಣಾ ನದಿಯಲ್ಲಿ ತೆಪ್ಪಗಳ ಸೆಣಸಾಟಕ್ಕೆ ವೇದಿಕೆ ಸಜ್ಜು!
    In (ರಾಜ್ಯ ) ಜಿಲ್ಲೆ
  • ಕೊಲ್ಹಾರದಲ್ಲಿ ಅ.20ರಂದು ಪುರಾಣ ಮಹಾಮಂಗಲ
    In (ರಾಜ್ಯ ) ಜಿಲ್ಲೆ
  • ಅ.೨೨ ರಂದು ಬನ್ನಿ ವಿನಿಮಯ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಬನ್ನಿ ವಿನಿಮಯ ಕಾರ್ಯಕ್ರಮ ಇರುವುದಿಲ್ಲ
    In (ರಾಜ್ಯ ) ಜಿಲ್ಲೆ
  • ೧ ಕೋಟಿ ರೂ.ಗೂ ಅಧಿಕ ಮೌಲ್ಯದ ಗಾಂಜಾ ಜಪ್ತು!
    In (ರಾಜ್ಯ ) ಜಿಲ್ಲೆ
  • ಸಚಿವ ಎಂ.ಬಿ.ಪಾಟೀಲರಿಗೆ ಕೃತಜ್ಞತೆ ಸಲ್ಲಿಸಿದ ಬಿಲ್ಲುಗಾರ್ತಿ
    In (ರಾಜ್ಯ ) ಜಿಲ್ಲೆ
  • ಭೀಕರ ಅಗ್ನಿ ಅವಘಡಕ್ಕೆ ಲಕ್ಷಾಂತರ ಮೌಲ್ಯದ ಮಳಿಗೆ ಭಸ್ಮ!
    In (ರಾಜ್ಯ ) ಜಿಲ್ಲೆ
  • ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆಗೆ ₹5,000 ದಂಡ
    In (ರಾಜ್ಯ ) ಜಿಲ್ಲೆ
  • ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು :ಶಾಸಕ ಪಾಟೀಲ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.