ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲೂಕಿನಲ್ಲಿ ಹಲವು ವರ್ಷಳಿಂದ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿರುವ ೮ ಸಹಕಾರ ಸಂಘಗಳ ನೋಂದಣಿ ರದ್ದುಪಡಿಸಲು ನಿರ್ಧರಿಸಲಾಗಿದ್ದು, ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ.
ಈ ಸಂಘಗಳು ಬೈಲಾದಂತೆ ಕಾರ್ಯನಿರ್ವಹಿಸದೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರು ಇವುಗಳನ್ನು ಈಗಾಗಲೇ ಸಮಾಪನೆಗೊಳಿಸಿ ಆದೇಶಿಸಿದ್ದಾರೆ.
ಈ ಸಂಘಗಳು ನೋಂದಾಯಿತ ವಿಳಾಸದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಆಡಳಿತ ಮಂಡಳಿ, ಕಾರ್ಯದರ್ಶಿಗಳ ವಿವರ ಮತ್ತು ಲೆಕ್ಕ ಪರಿಶೋಧನಾ ಮಾಹಿತಿ ಲಭ್ಯವಿಲ್ಲ ಎಂದು ಸಮಾಪನಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂಘಗಳಿಂದ ಸಾರ್ವಜನಿಕರಿಗೆ ಅಥವಾ ವ್ಯಕ್ತಿಗಳಿಗೆ ಯಾವುದೇ ಕೊಡತಕ್ಕ ಅಥವಾ ಬರತಕ್ಕ ಬಾಕಿಗಳಿದ್ದಲ್ಲಿ, ಸೂಕ್ತ ದಾಖಲೆಗಳೊಂದಿಗೆ ೭ ದಿನಗಳೊಗಾಗಿ ವಿಜಯಪುರ ಉಪ ವಿಭಾಗದ ಸಹಾಯಕ ನಿಬಂಧಕರ ಕಚೇರಿಯ ಸಮಾಪನಾಧಿಕಾರಿಗಳು,ಸಹಕಾರ ಸಂಘಗಳ ನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ.
ನೋಂದಣಿ ರದ್ದತಿಗೊಳಗಾದ ಸಂಘಗಳ ವಿವರ: ಸುಹಾಗ ಪ್ರಾಥಮಿಕ ಗ್ರಾಹಕರ ಸಹಕಾರ ಸಂಘ ವಿಜಯಪುರ ಬಂಜಾರಾ ಗೃಹ ನಿರ್ಮಾಣ ಸಹಕಾರ ಸಂಘ ಹೆಗಡಿಹಾಳ ಗೃಹ ನಿರ್ಮಾಣ ಸಹಕಾರ ಸಂಘ ಲೋಹಗಾಂವ ಎಲ್.ಟಿ. ಆಶಾದೀಪ ವಿವಿಧೋದ್ದೇಶಗಳ ಸಹಕಾರ ಸಂಘ ವಿಜಯಪುರ ಶ್ರೀ ರೇಣುಕಾ ಖಾದಿ ಗ್ರಾಮೋದ್ಯೋಗ ವಿವಿಧೋದ್ದೇಶಗಳ ಸಹಕಾರ ಸಂಘ ದರ್ಗಾ ಕರ್ನಾಟಕ ಗ್ರಾಮೀಣ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘ , ವಿಜಯಪುರ ಜಮುನಾ ವಿವಿಧೋದ್ದೇಶಗಳ ಸಹಕಾರ ಸಂಘ ವಿಜಯಪುರ ಗೀತಾ ಪ.ಜಾ,ಪ.ಪಂ ಮಹಿಳಾ ಸಹಕಾರಿ ಸಂಘ ವಿಜಯಪುರ.
ನಿಗದಿತ ಅವಧಿಯಲ್ಲಿ ಆಕ್ಷೇಪಣೆ ಬಾರದಿದ್ದಲ್ಲಿ, ಸಂಘಗಳ ನೋಂದಣಿ ರದ್ದತಿಗೆ ಅಂತಿಮ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಪನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
