ಉದಯರಶ್ಮಿ ದಿನಪತ್ರಿಕೆ
ಇಂಡಿ: ಬೇಡುವವರ ಕಷ್ಟಗಳಿಗೆ ಸದಾ ಆಶೀರ್ವಾದ ಹಾಗೂ ಭಕ್ತಾದಿಗಳ ಇಷ್ಟಾರ್ಥಗಳನ್ನು ಈಡೇರಿಸುವ ದೇವತಾ ಕಾರ್ಯಗಳಿಂದ ಗ್ರಾಮಗಳು ಸುಭಿಕ್ಷವಾಗುವ ಜತೆಗೆ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದು ಶಿರಶ್ಯಾಡದ ಮುರುಗೇಂದ್ರ ಶಿವಾಚಾರ್ಯರರು ಹೇಳಿದರು.
ನಗರದಲ್ಲಿ ಸಿದ್ದಿ ವಿನಾಯಕ ದೇವಸ್ಥಾನದ ೪ ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ರುದ್ರಾಭೊಷೇಕ, ಗಣಹೋಮ ಮತ್ತು ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಧರ್ಮಸಭೆಯ ಸಾನಿದ್ಯ ವಹಿಸಿ ಮಾತನಾಡಿದರು.
ನಾಗಣಸೂರದ ಶ್ರೀಕಂಠ ಶಿವಾಚಾರ್ಯರರು ಮಾತನಾಡಿ ದೇವಾಲಯ ಪ್ರತಿಷ್ಠಾಪನೆ ಆದಾಗಿನಿಂದಲೂ ಜಾತ್ರಾ ಮಹೋತ್ಸವ ಆಚರಿಸುತ್ತಿದ್ದೇವೆ. ಜಾತ್ರಾ ಮಹೋತ್ಸವ ಅಂಗವಾಗಿ ವಿಶೇಷ ಪೂಜೆ ಹವನ ಹೋಮ ಹಾಗೂ ದೀಪಾರಾಧನೆ ವಿವಿಧ ಕಲಾ ತಂಡದಿಂದ ವೀರಗಾಸೆ ಪ್ರದರ್ಶನ ನಡೆಯಿತು.
ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರರು, ಅನೀಲಗೌಡ ಬಿರಾದಾರ, ಬಂಗಾರದ ಅಂಗಡಿ ಮಾಲಿಕರ ಸಂಘದ ಅಧ್ಯಕ್ಷ ಸೋಮನಗೌಡ ಬಿರಾದಾರ, ಸುದೀರ ಕರಕಟ್ಟಿ ಮಾತನಾಡಿದರು.
ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ದೇವಸ್ಥಾನ ಸಮಿತಿಯ ಮಹಾಂತೇಶ ಪಾಟೀಲ, ಶ್ರೀಕಾಂತ ಬಡಿಗೇರ, ಸುನೀಲಗೌಡ ಬಿರಾದಾರ ಉಮೇಶ ಪಾಟೀಲ, ರಮೇಶ ಗೋಳಸಾರ ಮತ್ತಿತರಿದ್ದರು.

