ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ವಿಜಯಪುರ ಜಿಲ್ಲಾ ಹಾಗೂ ದೇವರಹಿಪ್ಪರಗಿ ತಾಲ್ಲೂಕು ಆಡಳಿತದ ವೈಫಲ್ಯ ಖಂಡಿಸಿ ಹಾಗೂ ನ್ಯಾಯಯುತ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ನಡೆದ ೮ನೇ ದಿನದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ ಭೇಟಿ ನೀಡಿ ಧರಣಿ ಕೊನೆಗೊಳಿಸಲು ಮನವಿ ಮಾಡಿದರು.
ಪಟ್ಟಣದ ಅಂಬೇಡ್ಕರ್ ವೃತ್ತದ ಧರಣಿ ಸ್ಥಳಕ್ಕೆ ಗುರುವಾರ ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಎಡಿ ಶಿವಾನಂದ ಮೂಲಿಮನಿ, ಪಿಡಿಓ ಕಾಶೀನಾಥ ಕಡಕಭಾವಿ, ಸಹಾಯಕ ಯೋಜನಾ ನಿರ್ದೇಶಕ ಶ್ರೀನಿವಾಸ ಪವಾರ, ವಿಷಯ ನಿರ್ವಾಹಕ ಜಿ.ರೋಡಗಿ ಆಗಮಿಸಿ ಧರಣಿ ಕೈಬಿಡಲು ವಿನಂತಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಮ್ಮ ಬೇಡಿಕೆಗಳು ಇಡೇರುವವರೆಗೆ ಹೋರಾಟ ನಿರಂತರ ಎಂದು ಹೇಳಿದರು.
ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ, ತಾಲ್ಲೂಕು ಸಂಚಾಲಕ ರಾಜಕುಮಾರ ಸಿಂದಗೇರಿ, ಸಂಘಟನಾ ಸಂಚಾಲಕ ಬಸವರಾಜ ಇಂಗಳಗಿ, ಶ್ರೀಕಾಂತ ಬಜಂತ್ರಿ, ಆಕಾಶ ಕೊಂಬಿನ, ಪ್ರಶಾಂತ ದೊಡಮನಿ, ರಮೇಶ ಬನ್ಸೋಡೆ, ಯಮನಪ್ಪ ಭೂತಾಳಿ, ದಯಾನಂದ ರಾಠೋಡ, ರಾಜು ಚವ್ಹಾಣ, ಮಹೇಶ ಖಾದ್ರಿ, ನಾಗರಾಜ ಬಳ್ಳಾರಿ, ಸಂತೋಷ ಗುಡಿಮನಿ, ಕಾಶೀನಾಥ ಮುಳಸಾವಳಗಿ, ಸುನೀಲ ದೊಡಮನಿ ಇದ್ದರು.

