ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಾಥವಾಗಿ ಅಲೆಯುತ್ತಿದ್ದ ಮಹಿಳೆಯನ್ನು ಪೊಲೀಸ್ ಸಿಬ್ಬಂದಿ, ಐಸಿಡಿಎಸ್ ಪೋಷಣ ಸಂಯೋಜಕ ಸೇರಿ ನಿರ್ಗತಿಕ ಕೇಂದ್ರಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದರು.
ರಾಷ್ಟ್ರೀಯ ಹೆದ್ದಾರಿ-೫೦ರಲ್ಲಿ ಸಿಂದಗಿಯಿಂದ ವಿಜಯಪುರಕ್ಕೆ ತೆರಳುವ ಮಾರ್ಗಮಧ್ಯೆದ ಪಡಗಾನೂರ ಕ್ರಾಸ್ ಹತ್ತಿರ ನಿರ್ಗತಿಕ ಮಹಿಳೆಯೊಬ್ಬರನ್ನು ಏಕಾಂಗಿಯಾಗಿ ಅಲೆಯುತ್ತಿರುವುದನ್ನು ಕಂಡು ಸಿಂದಗಿ ತಾಲ್ಲೂಕು ಐಸಿಡಿಎಸ್ ಪೋಷಣ ಸಂಯೋಜಕ ಪ್ರಮೋದ ಬೆಳಗಾವಿ ಮಹಿಳೆಯ ಪರಿಸ್ಥಿತಿ ಅವಲೋಕಿಸಿ, ತಕ್ಷಣ ಕಾರ್ಯಪ್ರವೃತ್ತರಾಗಿ ೧೧೨ ಗೆ ಕರೆ ಮಾಡಿ ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ ಮಹಿಳೆಯನ್ನು ರಕ್ಷಣೆ ಮಾಡಿದರು. ನಂತರ ನಿರ್ಗತಿಕರ ಕೇಂದ್ರದ ಸಿಬ್ಬಂದಿಗೆ ಸಂಪರ್ಕಿಸಿ ಸುರಕ್ಷಿತವಾಗಿ ಕೇಂದ್ರಕ್ಕೆ ಕಳಿಸಿದರು.
ಪೊಲೀಸ್ ಸಿಬ್ಬಂದಿ ಪ್ರಕಾಶ ಭುಯ್ಯಾರ, ಜಹಾಂಗೀರ ಅವುಟಿ, ಮಳಸಿದ್ಧ ಬೋರಗಿ, ಪಾಷಾ ಜಮಾದಾರ, ಜಕ್ಕಪ್ಪ ಉಪ್ಪಲದಿನ್ನಿ, ಸುನೀಲ ನಾಯ್ಕೋಡಿ ಇದ್ದರು.

