ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಉತ್ತಮ ಮಳೆ, ತಾಲೂಕಿನ ಸಮೃದ್ಧಿ ಹಾಗೂ ಜನ-ಜಾನುವಾರುಗಳ ಕ್ಷೇಮಕ್ಕಾಗಿ ಸಿಂದಗಿಯ ಸಾರಂಗಮಠದಲ್ಲಿ ಆ.೨೩ರಂದು ಬೆಳಿಗ್ಗೆ ೬ ರಿಂದ ಆ.೨೪ರ ಬೆಳಿಗ್ಗೆ ೬ ಗಂಟೆಯವರೆಗೆ ೨೪ ಗಂಟೆಗಳ ಕಾಲ ನಿರಂತರ ಶಿವಭಜನೆ ಹಾಗೂ ಶಿವ ಸಪ್ತಾಹ ಆಯೋಜಿಸಲಾಗಿದೆ ಎಂದು ಪೂಜ್ಯಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡದ ಅವರು, ತಾಲೂಕಿನಾದ್ಯಂತ ಉತ್ತಮ ಮಳೆಯಾಗಿ ರೈತರು, ಜನರು ಹಾಗೂ ಜಾನುವಾರುಗಳ ಬದುಕು ಹಸನಾಗಲೆಂಬ ಸಂಕಲ್ಪದಿಂದ ಸಾಮೂಹಿಕವಾಗಿ ಶಿವನಾಮ ಸ್ಮರಣೆ ಹಾಗೂ ಪ್ರಾರ್ಥನೆ ಸಲ್ಲಿಸಲಾಗುವುದು. ಸಿಂದಗಿ, ಚಿಕ್ಕಸಿಂದಗಿ, ಬಂದಾಳ, ರಾಂಪುರ, ಬ್ಯಾಕೋಡ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಸಿಂದಗಿಯ ತಾಯಂದಿರು ಕೂಡ ಶಿವಭಜನೆಯಲ್ಲಿ ಪಾಲ್ಗೊಳ್ಳಲು ಉತ್ಸಾಹದಿಂದ ಮುಂದೆ ಬಂದಿದ್ದಾರೆ. ಶಿವ ಸಪ್ತಾಹದಲ್ಲಿ ಭಾಗವಹಿಸುವ ಭಕ್ತರು ಬಿಳಿ ಲುಂಗಿ, ವಸ್ತ್ರ ಹಾಗೂ ಟವಲ್ ತರಬೇಕು ಎಂದು ವಿನಂತಿಸಿದರು. ಸಭೆಯಲ್ಲಿ ಶ್ರೀಮಠದ ಉತ್ತರಾಧಿಕಾರಿ ಪೂಜ್ಯಶ್ರೀ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಹಾಗೂ ಸದ್ಭಕ್ತರು ಇದ್ದರು.

