ಉದಯರಶ್ಮಿ ದಿನಪತ್ರಿಕೆ
ಇಂಡಿ: ವಿಬಿ ಜಿ ರಾಮಜಿ ಯೋಜನೆಯಡಿ ತಾಲೂಕಿನಲ್ಲಿ ಬಬಲಾದ ಗ್ರಾ.ಪಂ ವ್ಯಾಪ್ತಿಯ ಘನ ತಾಜ್ಯ ವಿಲೇವಾರಿ ಘಟಕದ ಹತ್ತಿರ ಅರಣ್ಯ ಪ್ರದೇಶದಲ್ಲಿ ಟ್ರೆಂಚಳ ನಿರ್ಮಾಣ ಕಾಮಗಾರಿಯನ್ನು ಇಂಡಿ ತಾಲೂಕಾ ಇಓ ಮಹಾದೇವಪ್ಪ ಏವೂರ ಹಾಗೂ ಸಹಾಯಕ ನಿರ್ದೇಶಕ ಸಂಜಯ ಖಡಗೇಕರ ಭೇಟಿ ನೀಡಿ ಪರಿಶೀಲಿಸಿದರು.
ಕಾಮಗಾರಿ ಸ್ಥಳದಲ್ಲಿ ೬೪ ಮಹಿಳೆಯರು ೧೦ ಪುರುಷರು ಒಟ್ಟು ೭೪ ಕೂಲಿಕಾರರು ಭಾಗವಹಿಸಿದ್ದರು.
ಮಣ್ಣಿನ ಸಂರಕ್ಷಣೆ ಹಾಗೂ ಮಳೆ ನೀರು ಸಂಗ್ರಹಣೆಗೆ ಪೂರಕ ಕಾಮಗಾರಿಯಾಗಿದೆ ಎಂದರು.
ಕೂಲಿಕಾರರ ಜೊತೆಗೆ ಸಂವಾದ ನಡೆಸಿ ವಿಬಿ ಜಿ ರಾಮ ಜಿ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಒಂದು ಮಾನವ ದಿನಕ್ಕೆ ೩೮೨ ರೂ ರಂತೆ ೧೨೫ ದಿನಗಳ ಉದ್ಯೋಗ ಖಾತ್ರಿ ಪಡಿಸುವಲ್ಲಿ ಜಾಬ ಕಾರ್ಡ ಪ್ರಮುಖ ಪಾತ್ರ ವಹಿಸುತ್ತದೆ. ಕೆಲಸಕ್ಕಾಗಿ ಜಾಬ ಕಾರ್ಡ ಪಡೆಯುವದು ನಿಮ್ಮ ಹಕ್ಕಾಗಿದೆ.
ನಿಮ್ಮ ಜಾಬ ಕಾರ್ಡು ನಿಮಗೆ ಉದ್ಯೋಗ ಖಾತ್ರಿ ನೀಡುವದರ ಜೊತೆಗೆ ವಾರ್ಷಿಕ ೪೭೭೫೦ ರೂ ವೇತನದ ಖಾತ್ರಿ ನೀಡುತ್ತದೆ. ಇದಕ್ಕಾಗಿ ಎಲ್ಲರೂ ಜಾಬ ಕಾರ್ಡ ಗಳನ್ನು ಕಡ್ಡಾಯವಾಗಿ ಪಡೆದು ಈ ಯೋಜನೆಯ ಪಾಲುದಾರರಾಗಿ ಎಂದು ಮಹಾದೇವಪ್ಪ ಏವೂರ ಹೇಳಿದರು.
ತಾಲೂಕಿನ ಬಬಲಾದ ಗ್ರಾ.ಪಂ ನಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ ಆಂಡ ಅಜೀವಿಕಾ ಮಿಷನ್ ಗ್ರಾಮೀಣ ಯೋಜನೆಯ ಐಇಸಿ ಕಾರ್ಯಕ್ರಮದಡಿ ಜಾಬ ಕಾರ್ಡ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಅ. ೧೫ ರಿಂದ ತಾಲೂಕಿನಾದಂತಗ್ರಾ.ಪA ಮಟ್ಟದಲ್ಲಿ ಜಾಬ ಕಾರ್ಡ ಮೇಳ ಆಯೋಜಿಸಲಾಗಿದೆ. ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಕುಟುಂಬಗಳಿಗೆ ನಿಯಮಾನುಸಾರ ಸ್ವೀಕೃತಿ ನೀಡುವ ವ್ಯವಸ್ಥೆಯನ್ನು ಗ್ರಾ.ಪಂ ನಲ್ಲಿ ಮಾಡಲಾಗುತ್ತಿದೆ ಎಂದರು.

