ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ತಾಲೂಕಿನ ವ್ಯಾಪ್ತಿಯಲ್ಲಿನ ಬೈಲಾದಲ್ಲಿನ ಉದ್ದೇಶಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸದೇ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಿ ನೋಂದಣಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಕುರಿತು ಸಾರ್ವಜನಿಕರಿಂದ ಮಾಹಿತಿ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಈ ಸಹಕಾರ ಸಂಘಗಳು ತಮ್ಮ ನೋಂದಾಯಿತ ಸ್ಥಳ ಆಡಳಿತ ಮಂಡಳಿ ಮಾಹಿತಿ ಲಭ್ಯವಿರುವುದಿಲ್ಲ. ಅಲ್ಲದೆ, ಹಲವು ವರ್ಷಗಳಿಂದ ಸಂಘಗಳ ವ್ಯವಹಾರಗಳ ಲೆಕ್ಕಪರಿಶೋಧನೆಯೂ ನಡೆದಿರುವುದಿಲ್ಲ. ಸಂಘಗಳ ಕೊಡತಕ್ಕ ಹಾಗೂ ಬರತಕ್ಕ ಬಾಬುಗಳ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಿರುವುದಿಲ್ಲ.
ಈ ಹಿನ್ನೆಲೆಯಲ್ಲಿ, ಮಾನ್ಯ ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಳಗಾವಿ ಪ್ರಾಂತ, ಬೆಳಗಾವಿ ಹಾಗೂ ಮಾನ್ಯ ಸಹಕಾರ ಸಂಘಗಳ ಉಪನಿಬಂಧಕರು, ವಿಜಯಪುರ ಅವರು ಈ ಕುರಿತು ಆದೇಶ ಹೊರಡಿಸಿ ಸಮಾಪನಾಧಿಕಾರಿಯನ್ನು ನೇಮಕ ಮಾಡಿರುತ್ತಾರೆ.
ಆಕ್ಷೇಪಣೆಗೆ ೭ ದಿನಗಳ ಕೆಳಕಂಡ ಸಹಕಾರ ಸಂಘಗಳೊಂದಿಗೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಕೊಡತಕ್ಕ ಅಥವಾ ಬರತಕ್ಕ ಬಾಕಿ ಹೊಂದಿದ್ದಲ್ಲಿ, ಸಂಬಂಧಿಸಿದವರು ಸೂಕ್ತ ದಾಖಲೆಗಳೊಂದಿಗೆ ಈ ಪ್ರಕಟಣೆ ಹೊರಬಿದ್ದ ೦೭ ದಿನಗಳೊಳಗಾಗಿ ಸಮಾಪನಾಧಿಕಾರಿಯ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಅಥವಾ ಆಕ್ಷೇಪಣೆ ಸಲ್ಲಿಸುವಂತೆ ಕೋರಲಾಗಿದೆ.
ಸಹಕಾರ ಸಂಘಗಳಾದ ನವಕಲ್ಯಾಣ ವರ್ಧಮಾನ ಪತ್ತಿನ ಸಹಕಾರ ಸಂಘ, ವಿಜಯಪುರ, ಮುನ್ಸಿಪಲ್ ಕನ್ಸರ್ವೆನ್ಸಿ ನೌಕರರ ಪತ್ತಿನ ಸಹಕಾರ ಸಂಘ, ವಿಜಯಪುರ, ಕುಬೇರ ಪತ್ತಿನ ಸಹಕಾರ ಸಂಘ, ವಿಜಯಪುರ, ಶಿಕ್ಷಣ ಪ್ರಸಾರಕ ಮಂಡಳಿ ನೌಕರರ ಪತ್ತಿನ ಸಹಕಾರ ಸಂಘ, ವಿಜಯಪುರ, ತಾಲೂಕು ಎಸ್‌ಸಿ/ಎಸ್‌ಟಿ ಗೃಹ ನಿರ್ಮಾಣ ಸಹಕಾರ ಸಂಘ, ವಿಜಯಪುರ, ಶ್ರೀ ನಿರಂಜನ ಅವಧೂತ ಪತ್ತಿನ ಸಹಕಾರ ಸಂಘ, ವಿಜಯಪುರ, ಶ್ರೀಶೈಲ ಮಲ್ಲಿಕಾರ್ಜುನ ಪತ್ತಿನ ಸಹಕಾರ ಸಂಘ, ವಿಜಯಪುರ, ಕುಬೇರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ., ವಿಜಯಪುರ ಹಾಗೂ ಲೋಕಮಾನ್ಯ ಬಾಲಗಂಗಾಧರ ತಿಲಕ ಪತ್ತಿನ ಸಹಕಾರ ಸಂಘ, ವಿಜಯಪುರ ಸೇರಿವೆ ಎಂದು ಸಮಾಪನಾಧಿಕಾರಿಗಳು, ಸಹಕಾರ ಸಹಕಾರ ಸಂಘಗಳ ನಿರೀಕ್ಷಕರು, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ವಿಜಯಪುರ ಉಪ ವಿಭಾಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
