ವಿಜಯಪುರ: ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರ ಒತ್ತಾಯಕ್ಕೆ ಮಣಿದು, ಏಕಕಾಲದಲ್ಲಿ ನಿಗದಿಯಾಗಿದ್ದ ಎರಡೆರಡು ಇಲಾಖೆಗಳ ಪರೀಕ್ಷಾ ವೇಳಾ ಪಟ್ಟಿ ಬದಲಿಸಿ ಇಂದು ಆದೇಶ ಹೊರಡಿಸಿದ್ದರಿಂದ ಆಭ್ಯರ್ಥಿಗಳಿಗೆ ಆಗುತ್ತಿದ್ದ ಅನ್ಯಾಯ ತಪ್ಪಿದಂತಾಗಿದೆ.
2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪೊಲೀಸ್ ಕಾನ್ ಸ್ಟೇಬಲ್ (ಸಿವಿಲ್) ಹಾಗೂ ಬ್ಯಾಕಲಾಗ್ 454 ಹುದ್ದೆಗಳ ಲಿಖಿತ ಪರೀಕ್ಷೆಯನ್ನು ನ.5 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12-30 ರವರೆಗೆ ನಡೆಸಲು ನಿರ್ಧರಿಸಿ ಪ್ರಕಟಣೆ ಹೊರಡಿಸಲಾಗಿತ್ತು. ಆದರೆ, ಅದೇ ದಿನ ಕೆಪಿಎಸ್ ಸಿ ಲಿಖಿತ ಪರೀಕ್ಷೆಗಳು ಕೂಡ ನಿಗದಿಯಾಗಿವೆ.
ಇದರಿಂದ ಎರಡು ಪರೀಕ್ಷೆಗಳನ್ನು ಬರೆಯಲು ಅರ್ಹರಾದ ಅಭ್ಯರ್ಥಿಗಳಿಗೆ ಅನ್ಯಾಯ ಆಗುವುದನ್ನು ಅರಿತು, ಕೆಪಿಎಸ್ ಸಿ ಹಾಗೂ ಕರ್ನಾಟಕ ಪೊಲೀಸ್ ಇಲಾಖೆಗಳ ಸಂಹವನದ ಕೊರತೆಯಿಂದ ಎರಡು ಪರೀಕ್ಷೆಗಳಿಗೆ ಶುಲ್ಕ ಭರಿಸಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ.
ಅಧಿಕಾರಿಗಳ ಲೋಪ, ನಿರ್ಲಕ್ಷ್ಯದಿಂದ ಸಾವಿರಾರು ಅರ್ಹ, ಯೋಗ್ಯ, ಪ್ರತಿಭಾನ್ವಿತ ಅಭ್ಯರ್ಥಿಗಳ ಭವಿಷ್ಯ ಹಾಗೂ ಕಟ್ಟಿರುವ ಶುಲ್ಕ ವ್ಯರ್ಥ ಆಗಬಾರದು. ಈ ಕೂಡಲೇ ಪೊಲೀಸ್ ಇಲಾಖೆಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಗಳನ್ನು ಮರು ಹೊಂದಿಸಿ ಆದೇಶ ಹೊರಡಿಸಬೇಕೆಂದು ಟ್ವಿಟ್ ಮೂಲಕ ಒತ್ತಾಯಿಸಿದ್ದರು.
ಶಾಸಕರ ಒತ್ತಾಯಕ್ಕೆ ಮಣಿದು, ನ.5 ರಂದು ನಡೆಸಲು ನಿಗದಿಪಡಿಸಿದನ್ನು ಬದಲಿಸಿ, ನ.19 ರಂದು ಪೊಲೀಸ್ ಕಾನ್ಸ ಟೇಬಲ್ ಪರೀಕ್ಷೆ ನಡೆಸಲು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಇದರಿಂದ ಎಲ್ಲಾ ಪರೀಕ್ಷೆಗಳನ್ನು ಅರ್ಹ ಅಭ್ಯರ್ಥಿಗಳು ಬರೆಯಲು ಅನುಕೂಲ ಆಗಿದಂತಾಗಿದೆ.
ಶಾಸಕರ ಕಾಳಜಿಗೆ ಅಭ್ಯರ್ಥಿಗಳು ಕರೆ ಮಾಡಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳು ಸಲ್ಲಿಸುತ್ತಿದ್ದಾರೆ.
Related Posts
Add A Comment