ವಿಜಯಪುರ: ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ ೪,೫೫,೬೩೨ (ಶೆ.೮೭.೪೬) ಫಲಾನುಭವಿಗಳು ನೊಂದಾಯಿಸಿಕೊಂಡಿದ್ದು, ಈ ಯೋಜನೆಯಡಿ ೧೫ನೇ ಆಗಸ್ಟ್ ೨೦೨೩ರವರೆಗೆ ನೊಂದಣಿಯಾದ ೪,೨೦,೩೪೬ ಫಲಾನುಭವಿಗಳಿಗೆ ಮೊದಲನೆ ಕಮತು ರೂ.೮೪೦೬.೯೨ ಲಕ್ಷ ಹಾಗೂ ೧೬ನೇ ಆಗಸ್ಟ್ ೨೦೨೩ರಿಂದ ೧೫ನೇ ಸೆಪ್ಟಂಬರ್ ೨೦೨೩ರ ಮಾಹೆಯವರೆಗೆ ನೊಂದಣಿಯಾದ ೪,೨೪,೮೩೬ ಫಲಾನುಭವಿಗಳಿಗೆ ೨ನೇ ಕಂತು ರೂ.೮೪೯೬.೭೨ ಲಕ್ಷ ರೂ.ಗಳು ಸೇರಿದಂತೆ ಒಟ್ಟು ೧೬೯೦೩.೬೪ ಲಕ್ಷ ಅನುದಾನ ಬಿಡುಗಡೆಯಾಗಿದೆ.
೪,೨೦,೩೪೬ ಫಲಾನುಭವಿಗಳ ಪೈಕಿ ೩೯೦೨೨೪ ಫಲಾನುಭವಿಗಳ ಅರ್ಜಿಗಳು ಹಾಗೂ ೨ನೇ ಕಂತಿನ ೪,೨೪,೮೩೬ ಫಲಾನುಭವಿಗಳ ಪೈಕಿ ೪,೦೫,೧೭೦ ಫಲಾನುಭವಿಗಳು ಡಿಬಿಟಿಯಿಂದ ಪುಶ್ ಆಗಿರುತ್ತವೆ. ಉಳಿದ ೪೯,೭೮೮ ಫಲಾನುಭವಿಗಳ ಅರ್ಜಿಗಳು ಡಿಬಿಟಿಗೆ ಬರಲು ಬಾಕಿ ಇರುತ್ತವೆ. ಮೊದಲನೇ ಕಂತಿನಲ್ಲಿ ಡಿಬಿಟಿಗೆ ಪುಶ್ ಆದ ೩,೯೦,೨೨೪ ಫಲಾನುಭವಿಗಳಲ್ಲಿ ೩,೫೫,೬೨೪ ಫಲಾನುಭವಿಗಳಿಗೆ ರೂ.೭೧,೧೨,೪೮,೦೦೦ ಹಾಗೂ ೨ನೇ ಕಂತಿನಲ್ಲಿ ೪,೦೫,೧೭೦ ಫಲಾನುಭವಿಗಳಲ್ಲಿ ೪,೦೩,೯೩೨ ಫಲಾನುಭವಿಗಳಿಗೆ ರೂ.೮೦,೭೮,೬೪,೦೦೦ ಖರ್ಚು ಭರಿಸಲಾಗಿದೆ.
ಮೊದಲನೇ ಕಂತಿನಲ್ಲಿ ಸೌಲಭ್ಯ ಪಡೆಯಲು ಬಾಕಿ ಇರುವ ೩೪೬೦೦ ಫಲಾನುಭವಿಗಳು ಹಾಗೂ ೨ನೇ ಕಂತಿನಲ್ಲಿ ೧೨೩೮ ಹೀಗೆ ಒಟ್ಟು ೩೮೮೩೮ ಫಲಾನುಭವಿಗಳು ತಾಂತ್ರಿಕ ತೊಂದರೆ ಫಲಾನುಭವಿಗಳು ಸಲ್ಲಿಸಿರುವ ಬ್ಯಾಂಕ್ ಖಾತೆ ಸಂಖ್ಯೆಗೆ ಆಧಾರ ಜೋಡಣೆಯಾಗಿರುವುದಿಲ್ಲ. ಖಾತೆ ವರ್ಗಾವಣೆ ಹಾಗೂ ಇತರೆ ತಾಂತ್ರಿಕ ಕಾರಣಗಳಿಂದ ಈಫೇಲ್ಡ್ ಆಗಿದ್ದು, ಅವುಗಳಲ್ಲಿ ೨೦೭೬೦ ಫಲಾನುಭವಿಗಳ ಮಾಹಿತಿ ಅಪ್ಡೇಟ್ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
