ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಚಿಕ್ಕರೂಗಿ ಗ್ರಾಮದಲ್ಲಿ ರೈತ ಮಲ್ಲಪ್ಪ ರೊಟ್ಟಿ ಅವರು ಒಂದೇ ದಿನ ಸತತ ೧೧ ಗಂಟೆಯಲ್ಲಿ ೧೮ ಎಕರೆ ಜಮೀನು ಬಿತ್ತನೆ ಮಾಡುವುದರ ಮೂಲಕ ಸಾಧನೆ ಮಾಡಿದ್ದಾರೆ
ತಾಲ್ಲೂಕಿನಲ್ಲಿ ಮಳೆಯ ಅಭಾವದ ನಡುವೆಯೂ ರೈತನ ಸಾಧನೆ ಗ್ರಾಮದ ರೈತರಿಗೆ ಹೊಸ ಹುರುಪು ನೀಡಿದಂತಾಗಿದೆ. ಬಿತ್ತನೆ ಮಾಡಿದ ನಂತರ ಗ್ರಾಮದಲ್ಲಿ ರೈತ ದಂಪತಿ ಮತ್ತು ಎತ್ತುಗಳನ್ನು ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಪ್ರಗತಿಪರ ರೈತ ಹಾಗೂ ಪಿಕೆಪಿಎಸ್ ಅಧ್ಯಕ್ಷ ನಾಗಣ್ಣ ಮುಳಜಿ ರೈತ ದಂಪತಿಗಳಿಗೆ ಸತ್ಕರಿಸಿ ಮಾತನಾಡಿ, ಗ್ರಾಮದ ರೈತನ ಸಾಧನೆ ಗ್ರಾಮದ ಮತ್ತಷ್ಟು ರೈತರಿಗೆ ಹೊಸ ಹುರುಪು, ಹರ್ಷ ನೀಡಿದಂತಾಗಿದೆ. ಇಂದಿನ ಕಾಲದಲ್ಲಿ ಕೃಷಿಯಿಂದ ದೂರ ಉಳಿಯುತ್ತಿರುವ ಸಂದರ್ಭದಲ್ಲಿ ಯುವ ಸಮುದಾಯಕ್ಕೆ ಇದೊಂದು ಪ್ರೇರಣೆಯಾಗಿದೆ ಎಂದರು
ಗ್ರಾಮದ ರೈತ ಮುಖಂಡ ಹಣಮಂತ್ರಾಯ ಮುಳಜಿ ಅವರ ಅಪೇಕ್ಷೆಯಂತೆ ಗ್ರಾಮದ ಅಶೋಕಗೌಡ ಪಾಟೀಲ ಅವರ ಜಮೀನಿನಲ್ಲಿ ಭಿತ್ತನೆ ಕಾರ್ಯವಾಗಿದ್ದು, ನೀಲಕಂಠ ಬೆನಕನಹಳ್ಳಿ, ಬಸವರಾಜ ಹೊಸಮನಿ, ಮಹಾಂತೇಶ ಉಡಗಿ, ಸಿಂಧೂರ ಪೂಜಾರಿ, ಲಗಮಣ್ಣ ಪೂಜಾರಿ, ಹಣಮಂತ ಕಂಬಾರ ಭೀಮಾಶಂಕರ ಪ್ಯಾಟಿ, ದೇವಾನಂದ ಬಾಗಲಕೋಟ, ಗಂಗಪ್ಪ ಇಮ್ಮನ, ಮಹಾದೇವ ಕಡ್ಲೇವಾಡ, ಸಂತೋಷ ಹಾದಿಮನಿ, ಬಾಬು ಖೋಜೀಗಿರ, ಜಟ್ಟೇಪ್ಪ ಯಳಕೋಟಿ, ಸಿದ್ದು ಕಡ್ಲೇವಾಡ, ದಾನಪ್ಪಗೌಡ ಪಾಟೀಲ, ಮಂಜುನಾಥ ಬಾಗಲಕೋಟ, ಶಶಿಕಾಂತ ಚಕ್ಕಡಿ, ದೇವಾನಂದ ಉಡಗಿ, ಸಂತೋಷ ಸಿಂದಗಿ ಸೇರಿದಂತೆ ಹಲವಾರು ರೈತರು ಇದ್ದರು.

