ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಿಕ್ಷಕರ ಆನ್ ಲೈನ್ ಹಾಜರಾತಿಯೊಂದಿಗೆ ಮಕ್ಕಳ ಹಾಜರಾತಿ ಕೂಡಾ ನಿರಂತರ ಆ್ಯಪ್ ಮೂಲಕ ನೊಂದಣಿ ಮಾಡಿಕೊಳ್ಳಬೇಕು ಎಂದು ಶಿಕ್ಷಣ ಸಂಯೊಜಕ ಜಿ.ಟಿ.ಕಾಗವಾಡ ಹೇಳಿದರು.
ಪಟ್ಟಣದ ಪಿಎಂಶ್ರೀ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡ ವಲಯದ ಮುಖ್ಯೋಪಾಧ್ಯಾಯರುಗಳ ಸಭೆಯಲ್ಲಿ ಅವರು ಮಾತನಾಡಿದರು.
ಮಕ್ಕಳ ಮುಖಚರ್ಯೆ ಮೂಲಕ ಮಕ್ಕಳ ಹಾಜರಾತಿಗೆ ರಾಜ್ಯ ಸರ್ಕಾರ ಮೊಬೈಲ ಮೂಲಕ ಮಕ್ಳಳ ನಿಖರ ಹಾಜರಾತಿಯನ್ನು ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಬೇಕು. ನೊಂದಣಿ ಕಾರ್ಯ ಬಹಳ ಕಡಿಮೆ ಇದ್ದು ಎಲ್ಲ ಶಿಕ್ಷಕರು ಕಡ್ಡಾಯವಾಗಿ ಬೇಗನೆ ಮಾಡಬೇಕು ಎಂದರು.
ಒಂದನೇ ತರಗತಿಗೆ ದಾಖಲಾದ ಮಕ್ಕಳ ವಿವರವನ್ನು ಎಸ್ಎಟಿಎಸ್ ತಂತ್ರಾಂಶದಲ್ಲಿ ಹಾಕಬೇಕು. ಶಾಲಾ ಯುಡೈಸ್ ಕಾರ್ಯವನ್ನು ಪೂರ್ಣಗೋಳಿಸಬೇಕು. ಮಕ್ಕಳ ಆಧಾರ ಪರಿಶೀಲನೆ ಕಾರ್ಯ ಪೂರ್ಣವಾಗಬೇಕು. ಆಧಾರ ಕಾರ್ಡ ಇಲ್ಲದ ಮಕ್ಕಳಿಗೆ ಅವರ ಪಾಲಕರಿಗೆ ತಿಳಿಸಿ ಆಧಾರ ಕಾರ್ಡ ತೆಗೆಯಲು ತಿಳಿಸಬೇಕು.
ಬಿಆರ್ಪಿ ಪಿ.ಡಿ.ಕಾಂಬಳೆ ಮಾತನಾಡಿ, ಮುಖ್ಯೋಪಾಧ್ಯಾಯರುಗಳು ಎದುರಿಸುತ್ತಿರುವ ಆನಲೈನ್ ಸಮಸ್ಯೆ ಕುರಿತು ಪರಿಹಾರ ಕ್ರಮ ತಿಳಿಸಿದರು. ನಿರಂತರ ಆ್ಯಪ್ ಮೂಲಕ ಮಕ್ಕಳ ನೊಂದಣಿ ಕಾರ್ಯದ ಕುರಿತು ವಿವರವಾಗಿ ಮಾಹಿತಿ ನೀಡಿದರು.
ನಮ್ಮ ಜಿಲ್ಲೆಯೂ ನೊಂದಣಿ ಕಾರ್ಯದಲ್ಲಿ ಬಹಳ ಹಿಂದೆ ಇದ್ದು, ಬೇಗನೆ ಎಲ್ಲ ಮಕ್ಕಳನ್ನು ಆನಲೈನ ನೊಂದಣಿ ಮಾಡಲು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಎಂ.ಅವಟಿ, ಪ್ರಕಾಶ ಚವ್ಹಾಣ, ವೈ.ಬಿ.ವಾಲಿಕಾರ, ಎಂ.ಎಂ.ಮಕಾನದಾರ, ಎಸ್.ಬಿ.ಕುಮಟಗಿ, ಕೆ.ಎಂ.ಗಳತಗಿ, ಶ್ರೀದೇವಿ ಗದಗಿಮಠ, ಎಚ್.ಎಂ.ಮುಲ್ಲಾ, ವಲಯದ ಎಲ್ಲ ಮುಖ್ಯೋಪಾಧ್ಯಾಯರುಗಳು ಹಾಜರಿದ್ದರು.

