Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕೈಜೋಡಿಸಿ :ಬಾಣಕಾರ

ಚಿಕ್ಕರೂಗಿ ರೈತನ ಭಿತ್ತನೆ ಸಾಧನೆ :ಗ್ರಾಮಸ್ಥರಿಂದ ಮೆರವಣಿಗೆ

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಎಸ್.ಐ.ಆರ್ ಲೋಪಗಳನ್ನು ಸರಿಪಡಿಸಲು ಬಿಜೆಪಿ ಆಗ್ರಹ
(ರಾಜ್ಯ ) ಜಿಲ್ಲೆ

ಎಸ್.ಐ.ಆರ್ ಲೋಪಗಳನ್ನು ಸರಿಪಡಿಸಲು ಬಿಜೆಪಿ ಆಗ್ರಹ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಮಹಾನಗರದಲ್ಲಿ ಎಸ್.ಐ.ಆರ್ ಕಾರ್ಯದಲ್ಲಿ ಲೋಪಗಳನ್ನು ಸರಿಪಡಿಸಿ, ನಗರದ ಪ್ರಮುಖ ಸ್ಥಳಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಐ.ಆರ್. ಒಂದು ಮಹತ್ವದ ಸಾಂವಿಧಾನಿಕ ಪ್ರಕ್ರಿಯೆಯಾಗಿದೆ, ಆದರೆ ಕೆಲವರು ಈ ಆಶಯ ಬುಡಮೇಲು ಮಾಡುವ ಷಡ್ಯಂತ್ರದಲ್ಲಿ ತೊಡಗಿಸಿಕೊಂಡಿದ್ದಾರೆ,
ವಿಜಯಪುರ ಮಹಾನಗರದಲ್ಲಿ ನಡೆಯುತ್ತಿರುವ ಎಸ್.ಐ.ಆರ್. ಕಾರ್ಯವು ಅತ್ಯಂತ ಅವ್ಯವಸ್ಥೆಯಿಂದ ಕೂಡಿದ್ದು, ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ದೂರಿದರು.
ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಸರ್ಕಾರದಿಂದ ನೇಮಕವಾಗಿರುವ ಬಿ.ಎಲ್.ಒ ಗಳು ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ಆದರೆ, ನಮ್ಮ ನಗರದಲ್ಲಿ ಬಹಳಷ್ಟು ಬಿ.ಎಲ್.ಓಗಳು ಮನೆಮನೆಗೆ ಭೇಟಿ ನೀಡುತ್ತಿಲ್ಲ, ಬದಲಾಗಿ, ಒಂದೇ ಕಡೆ ದೇವಸ್ಥಾನ, ಮಸೀದಿಗಳಲ್ಲಿ ಹಾಗೂ ಶಾಲೆಗಳಲ್ಲಿ ಕುಳಿತುಕೊಂಡು ತಮ್ಮಿಷ್ಟದಂತೆ ಫಾರ್ಮ್‌ಗಳನ್ನು ವಿತರಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಮೇಯರ್ ಎಂ.ಎಸ್‌. ಕರಡಿ ಮಾತನಾಡಿ, ಈ ಪ್ರಕ್ರಿಯೆ ಸರ್ಮಪಕವಾಗಿ ನಡೆಯದೇ ಹೋದರೆ ಅನೇಕ ತೊಂದರೆ ಉಂಟಾಗುವುದು ಸಹಜ,
ಇದರಿಂದಾಗಿ ನೈಜ ಹಾಗೂ ಅರ್ಹ ಮತದಾರರಿಗೆ ತೊಂದರೆಯಾಗುತ್ತಿದೆ.
ಇದರ ಜೊತೆಗೆ, ಮತದಾರರ ಮ್ಯಾಪಿಂಗ್ ಕಾರ್ಯವು ಕೂಡ ಸಂಪೂರ್ಣ ಅವೈಜ್ಞಾನಿಕವಾಗಿ ಹಾಗೂ ತಪ್ಪಾಗಿ ನಡೆದಿದೆ ಎಂದು ದೂರಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ಬಿ.ಎಲ್‌.ಓ ಗಳಿಗೆ ಈ ಬಗ್ಗೆ ಸರಿಯಾದ ತರಬೇತಿ ನೀಡದ ಕಾರಣ ಇಂತಹ ಗಂಭೀರ ಲೋಪದೋಷಗಳು ಉಂಟಾಗುತ್ತಿವೆ. ಬಿಎಲ್ ಓಗಳು ಈಗಾಗಲೇ ತಮ್ಮ ಸರಕಾರಿ ನೌಕರಿ ಮಾಡುತ್ತಿರುವುದರಿಂದ ಬಿಡುವು ಮಾಡಿಕೊಂಡು ಎಸ್.ಐ.ಆ‌ ಕಾರ್ಯ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಹಾಗೂ ಎಲ್ಲ ಫಾರ್ಮಗಳು ಹೊತ್ತಿಕೊಂಡು ಮನೆಮನೆಗೆ ಹೋಗಲು ಆಗುವುದಿಲ್ಲ, ನಾವಿರುವ ಜಾಗಕ್ಕೇ ಬನ್ನಿರಿ ಎಂದು ಹೇಳುತ್ತಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಅವರಿಗೆ ನೆರವಾಗಲು ಅವರಿಗೆ ಸಹಾಯಕ ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿದರು.
ಇಬ್ರಾಹಿಂಪುರ ವಾರ್ಡ ಸಂಖ್ಯೆ 21ರ ಶಾಲೆ ಸಂಖ್ಯೆ 06, ಆಲಅಮೀನ ಭಾಗದಲ್ಲಿ, 9,11, 14, 31 ಹಾಗೂ 33 ನೇ ವಾರ್ಡ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಸರಿಯಾಗಿ ಕಾರ್ಯನಿರ್ವಹಣೆ ಆಗದೇ ಇರುವುದರಿಂದ ಮತದಾರರಿಗೆ ತೊಂದರೆಯಾಗುತ್ತಿದೆ.
ಆದ್ದರಿಂದ, ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಪಾರದರ್ಶಕ ಪ್ರಕ್ರಿಯೆಗಾಗಿ, ತಕ್ಷಣವೇ ವಿಜಯಪುರ ನಗರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ‘ಸಹಾಯವಾಣಿ ಕೇಂದ್ರ’ಗಳನ್ನು ಆರಂಭಿಸಿ ಎಂಬ ಬೇಡಿಕೆ ಮೊಳಗಿತು. ಮನೆ-ಮನೆಗೆ ತೆರಳಿ ಕಾರ್ಯನಿರ್ವಹಿಸುವಂತೆ ಬಿ.ಎಲ್.ಒ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂಬ ಸ್ಪಷ್ಟ ನಿರ್ದೇಶನ ನೀಡುವಂತೆ
ಕೋರಿದರು‌.
ಉಪ ಮೇಯರ್ ಸುಮಿತ್ರಾ ಜಾಧವ, ಡಾ.ಸುರೇಶ ಬಿರಾದಾರ, ಗೋಪಾಲ ಘಟಕಾಂಬಳೆ, ಉಮೇಶ್ ಕಾರಜೋಳ, ಭೀಮಾಶಂಕರ ಹದನೂರ, ಸಂಜಯ ಪಾಟೀಲ ಕನಮಡಿ, ಮಳುಗೌಡ ಪಾಟೀಲ್, ಶಿವರುದ್ರ ಬಾಗಲಕೋಟ, ರಾಹುಲ ಜಾಧವ, ರಾಜಶೇಖರ ಮಗಿಮಠ, ಸುನೀತಾ ಒಡೆಯರ, ಬಸವರಾಜ ಬೈಚಬಾಳ, ಹರ್ಷಗೌಡ ವಿಜಯ್ ಜೋಶಿ ಪಾಟೀಲ, ಕೃಷ್ಣ ಗುನ್ನಾಳಕರ, ಶ್ರೀಕಾಂತ ಶಿಂಧೆ, ರಾಜೇಶ ತಾವಸೆ, ವಿನಾಯಕ ದಹಿಂಡಿ, ರವೀಂದ್ರ ಲೋಣಿ, ಮಹೇಶ ಒಡೆಯರ, ಪಾಪುಸಿಂಗ್ ರಜಪೂತ, ಚಿನ್ನು ಚಿನಗುಂಡಿ, ವಿವೇಕ ತಾವರಗೇರಿ, ಸದಾಶಿವ ಭೂಟಾಳೆ, ಸಂಗಮೇಶ ಉಕ್ಕಲಿ, ವಿಜಯ ಹಿರೇಮಠ, ಆನಂದ ಮುಚ್ಚಂಡಿ, ಪ್ರಫುಲ್ ಪವಾರ, ಸಿದ್ದು ಮಲ್ಲಿಕಾರ್ಜುನಮಠ, ಭರತ ಕೋಳಿ, ಸತೀಶ ಗಾಯಕವಾಡ, ಉಮೇಶ್ ವಿರಕರ, ಗೇಸುದರಾಜ ಇನಾಮದಾರ, ಬಸವರಾಜ ಹಳ್ಳಿ, ಗಣೇಶ ರಣದೇವಿ, ಯೋಗೇಶ ಸುಲಾಖೆ, ರವಿ ಕನ್ನೊಳ್ಳಿ, ಗುರುರಾಜ ಜೋಶಿ, ಸಂತೋಷ ಪತ್ತಾರ, ಗಣೇಶ ಉಪ್ಪಾರ, ರವಿ ಬಿರಾದಾರ, ಬಸವರಾಜ ಮಣೂರ, ಶಿವಾನಂದ ರೂಡಗಿ, ವಿನಾಯಕ ಕುಂದನಗಾರ ಅನಿಲ ಉಪ್ಪಾರ, ಪ್ರಶಾಂತ ಬಿಜಾಪುರ, ಭಾರತಿ ಭೂಯಾರ, ಜಯಶ್ರೀ ಅಫಜಲಪುರ, ಬಸಮ್ಮ ಗುಜರಿ, ರೇಖಾ ಚವ್ಹಾಣ, ಮೀನಾ ಕುಂದನಗಾರ, ಮಂಜುಳಾ ಮುತ್ತಗೀಕರ, ಜಯಶ್ರೀ ಬಿರಾದಾರ, ಭಾರತಿ ಶಿವಣಗಿ, ಶಿವರುದ್ರ ಹಿರೇಮಠ ಪಾಲ್ಗೊಂಡಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕೈಜೋಡಿಸಿ :ಬಾಣಕಾರ

ಚಿಕ್ಕರೂಗಿ ರೈತನ ಭಿತ್ತನೆ ಸಾಧನೆ :ಗ್ರಾಮಸ್ಥರಿಂದ ಮೆರವಣಿಗೆ

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭ

ಆನಲೈನ್ ಹಾಜರಾತಿಗೆ ನೊಂದಣಿ ಮಾಡಿ :ಕಾಗವಾಡ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕೈಜೋಡಿಸಿ :ಬಾಣಕಾರ
    In (ರಾಜ್ಯ ) ಜಿಲ್ಲೆ
  • ಚಿಕ್ಕರೂಗಿ ರೈತನ ಭಿತ್ತನೆ ಸಾಧನೆ :ಗ್ರಾಮಸ್ಥರಿಂದ ಮೆರವಣಿಗೆ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭ
    In (ರಾಜ್ಯ ) ಜಿಲ್ಲೆ
  • ಆನಲೈನ್ ಹಾಜರಾತಿಗೆ ನೊಂದಣಿ ಮಾಡಿ :ಕಾಗವಾಡ
    In (ರಾಜ್ಯ ) ಜಿಲ್ಲೆ
  • ಎಸ್.ಐ.ಆರ್ ಲೋಪಗಳನ್ನು ಸರಿಪಡಿಸಲು ಬಿಜೆಪಿ ಆಗ್ರಹ
    In (ರಾಜ್ಯ ) ಜಿಲ್ಲೆ
  • ದೇಶದ ಪ್ರಗತಿಗೆ ಡಾ.ಜಗಜೀವನರಾಮ ಕೊಡುಗೆ ಅನನ್ಯ
    In (ರಾಜ್ಯ ) ಜಿಲ್ಲೆ
  • ಜು.೯ರಂದು ಸ್ವಾತಂತ್ರ‍್ಯದ ಓಟ ನಾಟಕ ಪ್ರದರ್ಶನ
    In (ರಾಜ್ಯ ) ಜಿಲ್ಲೆ
  • ಅಥಣಿಯಲ್ಲಿ ಸೂಪರ್ ಬಜಾರ್ ಉದ್ಘಾಟನೆ
    In (ರಾಜ್ಯ ) ಜಿಲ್ಲೆ
  • ಇಂಡಿ ಸಾರ್ವಜನಿಕ ಆಸ್ಪತ್ರೆಗೆ ಸ್ತ್ರೀರೋಗ ತಜ್ಞರ ನಿಯೋಜನೆ
    In (ರಾಜ್ಯ ) ಜಿಲ್ಲೆ
  • ಅವಶ್ಯವಿರುವ ಎಲ್ಲಕಡೆ ಬಸ್ ನಿಲ್ದಾಣ ನಿರ್ಮಾಣ :ಸವದಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.