ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕದ ಸದಸ್ಯರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
೨೦೨೫-೨೬ ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.೮೦ ಮತ್ತು ಅದಕ್ಕೂ ಅಧಿಕ ಫಲಿತಾಂಶ ಪಡೆದ ಮಕ್ಕಳು ಪ್ರತಿಭಾ ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ.
ಅರ್ಹ ಮಕ್ಕಳ ಅಂಕಪಟ್ಟಿ ಮತ್ತು ಭಾವಚಿತ್ರ ದೊಂದಿಗೆ ಅರ್ಜಿಯನ್ನು ಅವರ ಪಾಲಕರು ಆಯಾ ತಾಲೂಕು ಘಟಕದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಗೆ ಸಲ್ಲಿಸಬೇಕು.
ವಿಜಯಪುರ ನಗರ ಮತ್ತು ತಾಲೂಕಿನ ಸದಸ್ಯರು ಕಾರ್ಯದರ್ಶಿಗಳಾದ ಅವಿನಾಶ ಬಿದರಿ (ಮೊ: 9513139595) ಮತ್ತು ವಿನೋದ ಸಾರವಾಡ (ಮೊ: 9916553711 ಅವರಿಗೆ ಸಲ್ಲಿಸಬೇಕು.
ಅರ್ಜಿಗಳನ್ನು ಸಲ್ಲಿಸಲು ಜುಲೈ.೧೦ ಕೊನೆಯ ದಿನವಾಗಿರುತ್ತದೆ.
ಈ ತಿಂಗಳು ಮೂರನೆ ವಾರ ನಡೆಯಲಿರುವ ಪತ್ರಿಕಾ ದಿನಾಚರಣೆಯಂದು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

