ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯಾಗಿ 05 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ‘ಸಹಕಾರದಿಂದ ಸಮೃದ್ಧಿ’ ಎಂಬ ಧ್ಯೇಯ ವಾಕ್ಯದೊಂದಿಗೆ, ಜೂ.01 ರಂದು ʼಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು, ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ., ವಿಜಯಪುರ ಹಾಗೂ ಶಾಂತಿನಿಕೇತನ ಶಿಕ್ಷಣ ಸಂಸ್ಥೆ, ವಿಜಯಪುರʼ ಇವರುಗಳ ಸಹಯೋಗದೊಂದಿಗೆ “ಸಹಕಾರ ವಿಚಾರ ಸಂಕೀರ್ಣ” ಕಾರ್ಯಕ್ರಮವನ್ನು ಶಾಂತಿನಿಕೇತನ ಕಾಲೇಜು ಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸುರೇಶ ಬಿರಾದಾರ, ಅಧ್ಯಕ್ಷರು ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಇವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಸಂಯುಕ್ತ ಸಹಕಾರಿಯ ನಿರ್ದೇಶಕ ಸಂಜಯ ಪಾಟೀಲ ವಹಿಸಿದ್ದರು.
ಅತಿಥಿಗಳಾಗಿ ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ. ಉಪಾಧ್ಯಕ್ಷ ಚಂದ್ರಶೇಖರ ಕವಟಗಿ, ಹಾಗೂ ಒಕ್ಕೂಟದ ನಿರ್ದೇಶಕರಾದ ಸಿದ್ಧು ಮಲ್ಲಿಕಾರ್ಜುನ ಮಠ, ಅರುಣ ಎಸ್. ಮಠ, ಅರುಣ ಆರ್. ವಾರದ ಉಪಸ್ಥಿತರಿದ್ದರು.
ʼಸಹಕಾರ ಕ್ಷೇತ್ರದ ಪರಿಚಯ ಮತ್ತು ಕಾರ್ಯವೈಖರಿಗಳುʼ* ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿ ಆರ್.ಎಮ್. ಬಣಕಾರ, ನಿವೃತ್ತ ಉಪಪ್ರಧಾನ ವ್ಯವಸ್ಥಾಪಕರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ವಿಜಯಪುರ ಇವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಒಕ್ಕೂಟದ ಮುಖ್ಯಕಾರ್ಯನಿರ್ವಾಹಕರಾದ ಪಂಪನಗೌಡ ಪಾಟೀಲ ನಡೆಸಿಕೊಟ್ಟರು. ಪ್ರಾರ್ಥನೆಯನ್ನು ಕು.ಪೂನಂ ಮತ್ತು ಕು.ಪಲ್ಲವಿ ನಡೆಸಿದರು. ಸ್ವಾಗತವನ್ನು ಅರುಣ ಆರ್. ವಾರದ ಕೋರಿದರು.
ಪ್ರಾಸ್ತಾವಿಕವನ್ನು ಚಂದ್ರಶೇಖರ ಕವಟಗಿ ನುಡಿದರು. ವಂದನಾರ್ಪಣೆಯನ್ನು ಸೌಹಾರ್ದ ಅಭಿವೃದ್ಧಿ ಅಧಿಕಾರಿ ಬಸವರಾಜ ಎಸ್ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಸೌಹಾರ್ದ ಸಹಕಾರಿಗಳು ಮತ್ತು ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸೇರಿದಂತೆ ಪ್ರತಿನಿಧಿಗಳು ಭಾಗವಹಿಸಿದ್ದರು.

