ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆ ಹಮ್ಮಿಕೊಂಡು ಮಕ್ಕಳ ಸ್ನೇಹಿ ಪೀಠೋಪಕರಣ ಬಳಕೆ ಹಾಗೂ ಪಾಲಕರು ತಮ್ಮ ಮಕ್ಕಳ ಕ್ರಿಯಾತ್ಮಕ ಚಟುವಟಿಕೆ ಅರಿತುಕೊಳ್ಳಲು ಪಾಲಕರ ಸಭೆ ಸಹಕಾರಿಯಾಗಿದೆ.
ಮಕ್ಕಳ ಸ್ನೇಹಿ ಪೀಠೋಪಕರಣ: ಅಂಗನವಾಡಿ ಕೇಂದ್ರಗಳಿಗೆ ಬರುವ ಆರಾಮದಾಯಕ ಮಕ್ಕಳ ಸ್ನೇಹಿ ಪೀಠೋಪಕರಣ ಪೀಠೋಪಕರಣಗಳನ್ನು ಗ್ರಾಮ ಪಂಚಾಯತಿಯ ಮೂಲಕ ಅಂಗನವಾಡಿಗಳಿಗೆ ಒದಗಿಸಲಾಗುತ್ತಿದೆ. ಮಕ್ಕಳ ಸ್ನೇಹಿ ಪೀಠೋಪಕರಣ ಬಳಕೆ ಮಾಡಿಕೊಂಡು ಮಕ್ಕಳು ತುಂಬಾ ಉಲ್ಲಾಸಿತರಾಗಿ ಉತ್ಸುಕತೆಯಿಂದ ಬರುತ್ತಿದ್ದು, ಕಲಿಕೆಯಷ್ಟೇ ಅಲ್ಲದೇ ಮಕ್ಕಳು ಕೇಂದ್ರಕ್ಕೆ ಬರುವ ಹಾಜರಾತಿ ಪ್ರಮಾಣ ಹೆಚ್ಚಳವಾಗುತ್ತಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸೂಚನೆಯಂತೆ ಪ್ರತಿ ಮಾಹೆ ಮೂರನೇ ಶನಿವಾರ ಜಿಲ್ಲೆಯಾದ್ಯಂತ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಮಕ್ಕಳು ಕ್ರೀಯಾತ್ಮಕ ಚಟುವಟಿಕೆಯಿಂದಿರಲು ಹಾಗೂ ಮಕ್ಕಳಲ್ಲಿರುವ ಅಂಜಿಕೆ, ಕೀಳರಿಮೆ ಹೋಗಲಾಡಿಸಿ ಓದಿನಡೆಗೆ ಚುರುಕುಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪಾಲಕರೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸಲಾಗುತ್ತಿದೆ.
ಅಕ್ಟೋಬರ್ ತಿಂಗಳಿನ ಮೂರನೇ ಶನಿವಾರ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಪಾಲಕರ ಸಭೆ ಜರುಗಿದ್ದು, ಈ ಸಭೆಗಳಲ್ಲಿ ಜಿಲ್ಲೆಯ ೨,೭೫೫ ಅಂಗನವಾಡಿ ಕೇಂದ್ರಗಳ ೨,೦೧,೯೭೫ ಮಕ್ಕಳ ೪೮,೩೧೫ ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು.
ಶಾಲಾ ಪೂರ್ವ ಶಿಕ್ಷಣದ ಚಟುವಟಿಕೆ ಹಾಗೂ ಮಕ್ಕಳ ಭಾಗವಹಿಸುವಿಕೆ ಕುರಿತು ಪ್ರಾಯೋಗಿಕವಾಗಿ ಚಟುವಟಿಕೆ ಕೈಗೊಂಡು ಪ್ರದರ್ಶಿಸಲಾಯಿತು. ಅನಾರೋಗ್ಯ ತಪ್ಪಿಸಲು ಮಕ್ಕಳಿಗೆ ಲಸಿಕೆ ನೀಡುವಂತೆ, ಮಕ್ಕಳು ಹೊಂದಿರುವ ಪೌಷ್ಠಿಕಾ ಮಟ್ಟ, ಮಗುವಿನ ಆರೋಗ್ಯದಲ್ಲಿ ಪಾಲಕರ ಪಾತ್ರದ ಕುರಿತು ತಿಳಿಸಲಾಯಿತು.
ಭಾಗ್ಯಲಕ್ಷಿö್ಮ ಸುಕನ್ಯಾ ಸಮೃದ್ದಿ ಯೋಜನೆ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು, ಅಂಗನವಾಡಿ ಕೇಂದ್ರಗಳಿಗಾಗಿ ನಿವೇಶನಕ್ಕಾಗಿ ದಾನಿಗಳನ್ನು ಗುರುತಿಸುವುದು ಹಾಗೂ ಶಾಲಾ ಆವರಣದಲ್ಲಿ ಕೊಠಡಿಗಳನ್ನು ಪಡೆಯಲು ಪಾಲಕರ ಪಾತ್ರ, ಮೂಲಭೂತ ಸೌಲಭ್ಯ ಹೊಂದುವುದರ ಕುರಿತು ತಿಳಿಸಲಾಯಿತು. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು, ಬಾಣಂತಿಯರು ಕೇಂದ್ರಕ್ಕೆ ಬಂದು ಅಗತ್ಯ ಪೌಷ್ಟಿಕ ಆಹಾರ ಪಡೆಯಲು ಫಲಾನುಭವಿ ಪ್ರೇರೆಪಿಸುವಂತೆ ತಿಳಿಸಲಾಯಿತು. ಕೇಂದ್ರದಲ್ಲಿ ಮಕ್ಕಳ ಹಾಜರಾತಿ ಹೆಚ್ಚಳ, ಗೈರು ಕಡಿಮೆ ಮಾಡುವುದು. ಮಕ್ಕಳ ವೈಯಕ್ತಿಕ ಶುಚಿತ್ವ ಕಾಪಡಿಕೊಳ್ಳಲು ಹಾಗೂ ಶೌಚಾಲಯ ಬಳಕೆ ಹಾಗೂ ಮಕ್ಕಳಲ್ಲಿ ಶಿಸ್ತು ಮೂಡಿಸುವುದು. ಕೇಂದ್ರದಿಂದ ಹೊರಗುಳಿಯದಂತೆ ನಿಗಾ ವಹಿಸುವಂತೆ ಪಾಲಕರಿಗೆ ತಿಳಿಸಲಾಯಿತು.ಬಾಲ ವಿಕಾಸ ಸಮಿತಿ, ತಾಯಂದಿರ ಸಭೆ, ಮಕ್ಕಳ ಕಾವಲು ಸಮಿತಿಯಲ್ಲಿ ಪೋಷಕರ ಸಹಭಾಗಿತ್ವ ಇರುವಂತೆ ತಿಳಿಸಲಾಯಿತು. ಪೋಷಣ್ ಮಾಹೆಯನ್ನಯಾಗಿ ಆಚರಿಸಲಾಗುತ್ತಿದ್ದು, ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಕೋರಲಾಯಿತು.
ಅಂಗನವಾಡಿ ಕೇಂದ್ರದಲ್ಲಿ ಪಾಲಕರ ಸಭೆಯ ಬಗ್ಗೆ ಪೋಷಕರ ಅಭಿಪ್ರಾಯಗಳು:
ಕಾನ್ವೆಂಟ್ ಶಾಲೆಗಳಲ್ಲಿ ಮಾತ್ರ ಪೋಷಕರ ಸಭೆಯನ್ನು ಮಾಡಲಾಗುತಿತ್ತು ಆದರೆ ಅಂಗನವಾಡಿ ಕೇಂದ್ರಗಳಲ್ಲೂ ಪಾಲಕರ ಸಭೆ ನಡೆಯುವುದು ಸಂತಸ ತಂದಿದೆ.ಅಂಗನವಾಡಿಯಲ್ಲಿ ಮಕ್ಕಳ ಶಾಲಾ ಪೂರ್ವ ಶಿಕ್ಷಣವನ್ನು ಗಮನಿಸಲು ಸಹಾಯಕವಾಗಿದೆ. ಶಾಲೆಗೆ ಹೋಗುವ ಮುನ್ನ ಮಕ್ಕಳ ಶಿಸ್ತು, ಶಿಕ್ಷಣ ಹಾಗೂ ಸಂಯಮದಲ್ಲಿ ಆಗುವ ಬದಲಾವಣೆ ಮತ್ತು ಶೈಕ್ಷಣಿಕ ಪ್ರಗತಿ ಹಂತ ತಿಳಿದುಕೊಳ್ಳಲು, ಮಕ್ಕಳಲ್ಲಿನ ವಿವಿಧ ಕೌಶಲ್ಯಗಳನ್ನು ಅವರ ಭಾಗವಹಿಸುವಿಕೆಯಿಂದ ತಿಳಿದುಕೊಳ್ಳಬಹುದಾಗಿದೆ. ಕುಂಠಿತ ಬೆಳವಣಿಗೆಯಿರುವ ಮಕ್ಕಳ ಮುಂಜಾಗ್ರತಾ ಕ್ರಮಗಳು ಹಾಗೂ ಇಲಾಖೆಯಿಂದ ಇರುವ ಸೌಲಭ್ಯಗಳ ತಿಳಿಯಲು ಸಹಾಯಕವಾಗುವುದು. ಕೇಂದ್ರಗಳ ಮೇಲ್ದರ್ಜೆಗೇರಿಸಲು, ಮಕ್ಕಳ ಮುಂದಿನ ಶಾಲಾ ಜೀವನದ ನಿಯಮಗಳನ್ನು ಅಂಗನವಾಡಿ ಕೇಂದ್ರದಲ್ಲಿ ಬುನಾದಿಯಾಗಿ ಪರಿವರ್ತಿಸಿಕೊಳ್ಳಲು ಸಹಾಯಕವಾಗಿದೆ. ಒಟ್ಟಾರೆಯಾಗಿ ಕೇಂದ್ರದ ಎಲ್ಲ ಚಟುವಟಿಕೆ ಹಾಗೂ ಬೆಳವಣಿಗೆಗಳ ಪರಿಶೀಲನೆ ಹಾಗೂ ಮೇಲ್ವಿಚಾರಣೆ ಮಾಡಲು ಪಾಲಕರ ಸಭೆ ಒಂದು ವೇದಿಕೆಯಾಗಿದೆ.
ಅಂಗನವಾಡಿ ಕೇಂದ್ರಗಳಲ್ಲಿ ಪೀಠೋಪಕರಣ-ವಾತಾವರಣ ನಿರ್ಮಾಣದಿಂದ ಹಾಜರಾತಿ ಹೆಚ್ಚಳ
Related Posts
Add A Comment