ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಹಾಶಿವರಾತ್ರಿ ಅಂಗವಾಗಿ ಅಮೃತಾನಂದಶ್ರೀಗಳ ಆಧ್ಯಾತ್ಮೀಕ ಪ್ರವಚನ ಕಾರ್ಯಕ್ರಮ ಕಡ್ಲೇವಾಡ ಪಿಸಿಎಚ್ ಗ್ರಾಮದಲ್ಲಿ ಜರುಗಲಿದೆ ಎಂದು ನಿವಾಳಖೇಡ ಗ್ರಾಮದ ಸಿದ್ಧಕೃಪಾ ಮಲ್ಲಿಕಾರ್ಜುನ ಮಹಾಂತಮಠದ ಬಸವಾನಂದಶ್ರೀಗಳು ಹೇಳಿದರು.
ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ರಾಚೋಟೇಶ್ವರಮಠದಲ್ಲಿ ಬುಧವಾರ ಜರುಗಿದ ಆಧ್ಯಾತ್ಮೀಕ ಪ್ರವಚನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇದೇ ದಿ:೧೩ ರಿಂದ ೨೬ ರವರೆಗೆ ಜರುಗಲಿರುವ ಆಧ್ಯಾತ್ಮೀಕ ಪ್ರವಚನ ಬೆಳಿಗ್ಗೆ ೬.೩೦ ರಿಂದ ೭.೩೦ ರವರೆಗೆ ನಿಗದಿಯಾಗಿದೆ. ಪ್ರತಿದಿನ ಪ್ರವಚನದ ನಂತರ ಮಹಾಪ್ರಸಾದ ವ್ಯವಸ್ಥೆಯಿದ್ದು, ಪ್ರವಚನಕ್ಕೆ ಸಹಕಾರಿಯಾಗಿ ಗ್ರಾಮಸ್ಥರ ನೇತೃತ್ವದಲ್ಲಿ ಪ್ರಚಾರ, ದಾಸೋಹ, ಹಣಕಾಸು, ಸ್ವಚ್ಛತಾ ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಸಾಯಿಕುಮಾರ ಬಿಸನಾಳ, ನಿಂಗರಾಯ ನಾಯ್ಕೋಡಿ, ಗೋವಿಂದ, ಸೋಮನಗೌಡ ಪಾಟೀಲ, ಅಡಿವೆಪ್ಪ ಕೊಂಡಗೂಳಿ, ಅಶೋಕ ಸೂಳಿಭಾವಿ, ಸಾಹೇಬಗೌಡ ರಡ್ಡಿ, ವಿಠ್ಠಲ ದೇಗಿನಾಳ, ವಿಠ್ಠಲ ಕನ್ನೋಳ್ಳಿ, ಚಂದ್ರಶೇಖರ ಗಣಜಲಿ, ಮಲ್ಲಿಕಾರ್ಜುನ ಬಿರಾದಾರ, ಪ್ರಭಾಕರ ಸೂಳಿಭಾವಿ, ಸುಭಾಸ ಕಬಾಡಗಿ, ಪಿಡ್ಡಪ್ಪ ಗಣಜಲಿ, ನಿಂಗರಾಯ ಸಂಗೋಗಿ, ಹಣಮಂತ ಸಂಗೋಗಿ, ಬಾಲಚಂದ್ರ ಗುಡ್ಡಳ್ಳಿ ಇದ್ದರು.