ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಾ ಎನ್ ಪಿ ಎಸ್ ನೌಕರ ಸಂಘದ ವತಿಯಿಂದ ವಿಠ್ಠಲ ಕಟಕಧೋಂಡ ಶಾಸಕರು ನಾಗಠಾಣ ಮತಕ್ಷೇತ್ರ ರವರಿಗೆ ಎನ್ ಪಿ ಎಸ್ ರದ್ದುಗೊಳಿಸಿ ಇದೆ ಬಜೆಟ್ ನಲ್ಲಿ ಒಪಿಎಸ್ ಜಾರಿಗೊಳಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಲು ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸ್ವೀಕರಿಸಿದ ಶಾಸಕರು ಎನ್ ಪಿ ಎಸ್ ರದ್ದುಗೊಳಿಸಿ ಇದೇ ಮಾರ್ಚ್ ಬಜೆಟ್ ನಲ್ಲಿ ಒ ಪಿಎಸ್ ಜಾರಿಗೊಳಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲು ನೂರಕ್ಕೆ ನೂರರಷ್ಟು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಎನ್ ಪಿ ಎಸ್ ನೌಕರ ಸಂಘದ ಅಧ್ಯಕ್ಷರಾದ ಡಿ ಎಸ್ ಬಗಲಿ, ನೌಕರ ಸಂಘದ ಅಧ್ಯಕ್ಷರಾದ ಬಸವರಾಜ ಮಜ್ಜಗಿ, ಶಿಕ್ಷಕರ ಸಂಘದ ಅಧ್ಯಕ್ಷರಾದ ಅನಿಲ ಸೊನಗಿ, ಶಿಕ್ಷಕರ ಸೊಸೈಟಿ ಅಧ್ಯಕ್ಷರಾದ ಎಸ್ ಎಸ್ ಪಾಟೀಲ, ವಿಕಲಚೇತನ ನೌಕರ ಸಂಘದ ಅಧ್ಯಕ್ಷರಾದ ಮಹಾಂತೇಶ ಉಮರಾಣಿ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಾನಂದ ಭಾಸಗಿ ನೌಕರರಾದ ಸತೀಶ ಬಗಲಿ,ಸುರೇಶ್ ಕರಜಗಿ,ರಾಣಿ ಝಳಕಿ, ರಾಜೇಶ್ವರಿ ಕಾಮಗೊಂಡ, ವಿಜಯಶ್ವೇರಿ ನಿಂಬರಗಿ,ಕಲಾವತಿ ಬೆಳ್ಳುಂಡಗಿ, ಜಗದೀಶ ಚಲವಾದಿ,ಸಿದ್ದಾರಾಮ ಬಗಲಿ, ಸಂತೋಷ ಬಿರಾದಾರ,ಗೋಪಾಲ ಜಾಧವ್, ಭೀಮಾಶಂಕರ ವಾಘಮೋರೆ, ಶ್ರೀಶೈಲ ಮಾಳಿ ಇನ್ನು ಅನೇಕ ನೌಕರರು ಉಪಸ್ಥಿತರಿದ್ದರು.

