ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ವಾರ್ಡ ನಂ. ೧೪ ಓಪಲ್ ಶಾಲೆ ಹತ್ತಿರ ವಾರದ ನಗರದಲ್ಲಿ ರಸ್ತೆ, ದುರಸ್ತಿ, ಬೀದಿದೀಪಗಳ ಅಳವಡಿಕೆ ಹಾಗೂ ಸ್ವಚ್ಚತೆಗಾಗಿ ಕರ್ಮಚಾರಿಗಳನ್ನು ಪ್ರತಿನಿತ್ಯ ವಾರ್ಡಿಗೆ ಕಳಿಸಿಕೊಡಲು ಮಹನಗರಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಸದರಿ ವಾರ್ಡ ನಂ. ೧೪ ಓಪಲ್ ಶಾಲೆ ಹತ್ತಿರ ವಾರದ ನಗರದಲ್ಲಿ ರಸ್ತೆ ವ್ಯವಸ್ಥೆ ಇರುವದಿಲ್ಲ ಅದರಿಂದ ಅಲ್ಲಿನ ನಿವಾಸಿಗಳಿಗೆ ತಿರುಗಾಡಲು ಸಹ ತೊಂದರೆ ಉಂಟಾಗುತ್ತಿದೆ. ಬಡಾವಣೆಯಲ್ಲಿ ಬೀದಿದೀಪಗಳ ಸಹ ಇರುವದಿಲ್ಲ ಸಾಯಂಕಾಲ ಆಗುತ್ತಿದ್ದಂತೆ ಹೊರಗೆ ಬರಲು ಅಂಜಿಕೆ ಬರುವ ಪರಿಸ್ಥಿತಿ ಇದೆ ಅಲ್ಲದೆ ವಿಜಯಪುರ ನಗರದಲ್ಲಿ ಕಳ್ಳರ ಹಾವಳಿ ಕೂಡ ಹೆಚ್ಚಾಗುತ್ತಿದೆ. ನಮ್ಮ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ಅಳವಡಿಸಿಕೊಡಲು ಬಡಾವಣೆಯಲ್ಲಿ ಸಾರ್ವಜನಿಕರಿಂದ ಮನವಿ ಸಲ್ಲಿಸಿ ಆದಷ್ಟು ಬೇಗನೆ ಬಡಾವಣೆಯ ಸಮಸ್ಯೆಗಳಿಗೆ ಸ್ಪಂದಿಸಲು ಕೋರಲಾಗಿದೆ.
ಈ ಸಂದರ್ಭದಲ್ಲಿ ಬಂದೇನವಾಜಿ ಕಮತಗಿ, ಹುಸೇನ ಶೇಖ, ಜುಬೇರ ಸಯ್ಯದ, ಉಮರ ಪಾಂಡು, ಮಸ್ತಾನ ಪಾಂಡು, ಕೆ.ಎ. ಮನಿಯಾರ ಮತ್ತಿರರು ಉಪಸ್ಥಿತರಿದ್ದರು.