ಉದಯರಶ್ಮಿ ದಿನಪತ್ರಿಕೆ
ಹೊನವಾಡ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಮಹಾಂತೇಶ ಮಾಲಗಾರ, ಉಪಾಧ್ಯಕ್ಷರಾಗಿ ಮೀರಾಸಾಬ್ ಗೌoಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಇವರಿಬ್ಬರನ್ನು ಹೊರತು ಪಡಿಸಿದರೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಜೆ ಎಸ್ ಕಾಪಸೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ ಪ್ರಕಟಿಸಿದರು.
ಗ್ರಾಮದ ಮುಖಂಡರಾದ ಲಿಂಗರಾಜ ಪಾಟೀಲ ಅಭಿನಂದಿಸಿ ಮಾತನಾಡಿದರು.
ಸಹಕಾರ ಸಂಘಗಳ ಯಶಸ್ಸಿಗೆ ಪ್ರಾಮಾಣಿಕತೆ ಅತಿಮುಖ್ಯ. ಈ ಕ್ಷೇತ್ರದ ಬಲವರ್ಧನೆಗೆ ಸಹಕಾರ ಮನೋಭಾವದಿಂದ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ನಿರ್ದೇಶಕರಾದ ಆನಂದ ಕೋರಬು ಚನ್ನಪ್ಪ ಕೋಟಿ ಪಾಂಡು ಶಿಂಧೆ ಮಲ್ಲಪ್ಪ ಆಕಳೆ ಶ್ಯಾಮು ಬಡಳ್ಳಿ ಅರವಿಂದ ಮಸಳಿ ದೇವೇಂದ್ರ ಪತ್ತಾರ ಶಂಕ್ರಪ್ಪ ತಳವಾರ ಮಹಾನಂದಾ ಗೂಗವಾಡ ಸರೋಜಾ ಪಾಂಡೆಗಾಂವಿ ಇದ್ದರು
ಶಂಕರ ಪಡತಾರೆ ಮಲ್ಲಪ್ಪ ಮಸಳಿ ಅಕ್ಬರ್ ತಿಕೋಟಿ ಮಾಣಿಕ ಶಿಂದೆ ಕೆಂಚಪ್ಪ ಪೂಜಾರಿ ದತ್ತಾ ಮೋಹಿತೆ ಗೋವಿಂದ ರಜಪೂತ ಶ್ರೀಶೈಲ ಕೋರಬು ನೀಲಪ್ಪ ಮಾಲಗಾರ ಸಂದೀಪ್ ಸಾವಂತ ಧರೆಪ್ಪ ಹೆಚ್ ಡಿ ಮೋದಿನಸಾಬ್ ವಾಲಿಕಾರ ಹಣಮಂತ ಶಿಂದೆ ಕಾರ್ಯ ನಿರ್ವಾಹಕ ಅಧಿಕಾರಿ ದುಂಡಪ್ಪ ಗುಗ್ಗರಿ, ಶಿವರುದ್ರಯ್ಯ್ ಮಠಪತಿ, ಸಂಬಾಜಿ ಜಾಧವ ಸುನಿಲ್ ಕೋಟಿ ಸುಧಾರಾಣಿ ಪೂಜಾರಿ ರಾಹುಲ್ ಗಡದಿ ಹಾಗೂ ಇನ್ನಿತರ ಗ್ರಾಮದ ಮುಖಂಡರು ಇದ್ದರು.