ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇದೇ ಜೂನ್ ೩ ರಂದು ವಿಶ್ವ ಬೈಸಿಕಲ್ ದಿನ ಆಚರಣೆ ಹಿನ್ನೆಲೆಯಲ್ಲಿ ಸೈಕಲ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ೭ ಗಂಟೆಗೆ ಸೈಕಲ್ ಜಾಥಾವು ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಿAದ ಆರಂಭವಾಗಿ, ಗೋಲಗುಂಬಜ, ಗಗನಮಹಲ್, ವೀರರಾಣಿ ಕಿತ್ತೂರ ರಾಣಿ ಚನ್ನಮ್ಮ ಕೇಂದ್ರ ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್, ಗಾಂಧಿಚೌಕ್, ಶಿವಾಜಿ ಸರ್ಕಲ್,ವಾಟರ್ ಟ್ಯಾಂಕ್, ಇಬ್ರಾಹಿಂ ರೋಜಾ, ಗೋದಾವರಿ ಮಾರ್ಗವಾಗಿ ವಾಟರ್ ಟ್ಯಾಂಕ್, ಬಿ.ಎಲ್.ಡಿ.ಇ ಮುಖ್ಯ ಗೇಟ್, ಹಾಸ್ಪಿಟಲ್ ಗೇಟ್, ಸಿದ್ದೇಶ್ವರ ದೇವಸ್ಥಾನ, ಗಾಂಧಿ ಚೌಕ್ ಮಾರ್ಗವಾಗಿ ಸಾಗಿ ಪುನಃ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಕ್ಕೆ ಅಗಮಿಸಿ ಮುಕ್ತಾಯಗೊಳ್ಳಲಿದೆ. ಸಾರ್ವಜನಿಕರು, ಯುವಕರು ಹಾಗೂ ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸೈಕಲ್ ಜಾಥಾವನ್ನು ಯಶಸ್ವಿಗೊಳಿಸುವಂತೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.
