ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆ(ಐಟಿಐ)ಯಲ್ಲಿ ಸೋಮವಾರ ಕೋಲಾರದ ಹೋಂಡಾ ಮೋಟಾರ್ ಸೈಕಲ್ ಸ್ಕೂಟರ್ ಇಂಡಿಯಾ ಪ್ರೈ. ಲಿ ಕಂಪನಿ ಅಪ್ರೆಂಟಿಸ್‌ಶಿ ಗಾಗಿ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ 81 ಜನ ಆಯ್ಕೆಯಾಗಿದ್ದಾರೆ.
ಈ ಕ್ಯಾಂಪಸ್ ಡ್ರೈವ್ ನಲ್ಲಿ 122 ತರಬೇತಿದಾರರು ಭಾಗವಹಿಸಿದ್ದರು. ಇವರಲ್ಲಿ 81 ಜನ ಆಯ್ಕೆಯಾಗಿದ್ದು, ಬಿ.ಎಲ್.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆಯ(ಐಟಿಐ)ಗೆ ಸೇರಿದ 75 ವಿದ್ಯಾರ್ಥಿಗಳಲ್ಲಿ 54 ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನಿಲಗೌಡ ಪಾಟೀಲ ಹಾಗೂ ಪ್ರಾಚಾರ್ಯರ ಎಂ. ಡಿ. ಪಡಸಲಗಿ ಅಭಿನಂದನೆ ಸಲ್ಲಿಸಿದ್ದಾರೆ.

