ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಜೈ ಹನುಮಾನ ಯುವ ಮಿತ್ರ ಮಂಡಳಿಯವರ ವತಿಯಿಂದ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಗ್ರಾಮಸ್ಥರಲ್ಲಿ ಭಕ್ತಿಭಾವ ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯಲಿದೆ.
“ಪಾರಂಪರಿಕ ಕೃಷಿ ಪದ್ಧತಿ ಹಾಗೂ ಸಾವಯವ ಕೃಷಿ” ಕುರಿತ ವಿಶೇಷ ಉಪನ್ಯಾಸವನ್ನ ಅದೃಶ್ಯ ಕಾಡಸಿದೇಶ್ವರ ಶ್ರೀಗಳು ಕನ್ನೇರಿ ಮಠ ಕೋಲ್ಲಾಪೂರ ಮತ್ತು ಮಾತೋಶ್ರೀ ಅಕ್ಕಮಹಾದೇವಿ ತಾಯಿಯವರು ಕಮರಿಮಠ ಚಿಕ್ಕಪಡಸಲಗಿ ಪುರ್ನವಸತಿ ಕೇಂದ್ರ ಆಗಮಿಸಿ ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮವು ಬುಧವಾರ ಏಪ್ರಿಲ್ 22 ರಂದು ಸಂಜೆ 6.00 ಗಂಟೆಗೆ ಶ್ರೀ ಹನುಮಾನ ದೇವಸ್ಥಾನ ಅವರಣ, ಚಿಕ್ಕಪಡಸಲಗಿಯಲ್ಲಿ ನಡೆಯಲಿದೆ. ಭಕ್ತರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಪನ್ಯಾಸದ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.
