ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲರಿಂದ ಫಲಾನುಭವಿಗಳಿಗೆ ವಿತರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಬಲೇಶ್ವರ ಮತಕ್ಷೇತ್ರದ ನಾನಾ ಫಲಾನುಭವಿಗಳಿಗೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸೋಮವಾರ ಮೀನುಗಾರಿಕೆ ಉಚಿತ ಕಿಟ್ ಮತ್ತು ಲೈಫ್ ಜಾಕೇಟುಗಳನ್ನು ವಿತರಿಸಿದರು.
ರಾಜ್ಯ ವಲಯ ಮತ್ತು ಜಿಲ್ಲಾ ಪಂಚಾಯಿತಿ ಯೋಜನೆಯಡಿ ಒಟ್ಟು 61 ಜನ ಫಲಾನುಭವಿಗಳು ಆಯ್ಕೆಯಾಗಿದ್ದು, ಅವರಲ್ಲಿ 11 ಫಲಾನುಭವಿಗಳಿಗೆ ಸಚಿವರು ಸಾಂಕೇತಿಕವಾಗಿ ಕಿಟ್ ಮತ್ತು ಲೈಫ್ ಜಾಕೇಟ್ ವಿತರಿಸಿದರು.
ಈ ಯೋಜನೆಯಡಿ ಬಬಲೇಶ್ವರ ತಾಲೂಕಿನ ಕೃಷ್ಣಾ ನದಿಯಲ್ಲಿ ಮೀನುಗಾರಿಕೆ ನಡೆಸುವ ಜೈನಾಪುರ, ಬಬಲಾದ, ದೇವರಗೆಣ್ಣೂರು, ಬೆಳ್ಳುಬ್ಬಿ, ಕಣಬೂರು, ಸುತಗುಂಡಿ, ತಿಕೋಟಾ ತಾಲೂಕಿನ ಕೆರೆಯಲ್ಲಿ ಮೀನುಗಾರಿಕೆ ನಡೆಸುವ ಬರಟಗಿ, ಅರಕೇರಿ, ಮಖಣಾಪುರ ಗ್ರಾಮದ ಮೀನುಗಾರರಿಗೆ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎಂ. ಎಚ್. ಭಾಂಗಿ, ಸಹಾಯಕ ನಿರ್ದೇಶಕ ಶ್ರೀಶೈಲ ಎಸ್. ಗಂಗನಳ್ಳಿ, ಡೋಮನಾಳ ಮೀನುಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ಶ್ರೀರಾಮಸಿಂಗ್ ರಾಠೋಡ ಸೇರಿದಂತೆ ಪದಾಧಿಕಾರಿಗಳು, ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

