ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ವೇತನ ಜಾಗೃತಿ ಅಭಿಯಾನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ, ಶೋಷಿತ ಸಮುದಾಯಗಳಿಗೆ ಶಿಕ್ಷಣ ನೀಡಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಜೆ. ಇಂಡಿ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನಿ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎಸ್ಸಿ, ಎಸ್ಟಿ, ಓಬಿಸಿ ಹಾಗೂ ಮೈನಾರಿಟಿ ಸೆಲ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ವೇತನ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕವಾಗಿ ಬಹಳಷ್ಟು ಕುಟುಂಬಗಳು ಮಕ್ಕಳ ಶಿಕ್ಷಣ ಕೊಡಿಸಲಾರದಷ್ಟು ಬಡತನ ಎದುರಿಸುತ್ತಿವೆ. ಸರ್ಕಾರ ಅಂತಹ ಮಕ್ಕಳ ಶೈಕ್ಷಣಿಕ ಬದುಕು ಉಜ್ವಲಗೊಳಿಸಲು ಶಿಷ್ಯ ವೇತನ ಜಾರಿಗೊಳಿಸಿದೆ. ಶಿಕ್ಷಣಕ್ಕೆ ಬಡತನ ಅಡ್ಡಿಯಾಗದು. ನಾವು ನಮ್ಮ ಗುರಿ ಮತ್ತು ಸಾಧನೆ ಕಡೆಗೆ ಗಮನ ಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರಲ್ಲದೆ, ನಮ್ಮಲ್ಲಿ ಬರುವ ಎಸ್ಸಿ ಎಸ್ಟಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ತರಬೇತಿ ಪಡೆಯಲು ಸಹಿತ ಸರ್ಕಾರ ಯೋಜನೆ ರೂಪಿಸಿದೆ ಎಂದರು.
ಈ ವೇಳೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಅನೀಲ ಬಿ. ನಾಯಕ ಮಾತನಾಡಿ, ವಿಜ್ಞಾನ-ತಂತ್ರಜ್ಞಾನ, ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಶಿಕ್ಷಣ ಒಂದು ಪ್ರಮುಖ ಸಾಧನವಾಗಿದೆ ಅದರಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಲವಾರು ಯೋಜನೆಗಳು ಜಾರಿಯಾಗಿವೆ ಎಂದರು.
ಈ ವೇಳೆಯಲ್ಲಿ ಬಾಗಲಕೋಟೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಸಹಾಯಕ ಅಧಿಕಾರಿ ಗುರುನಾಥ ಎಮ್.ಮಸಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕ ಡಾ.ಪಿ.ಎಸ್.ಪಾಟೀಲ, ಎಸ್ಸಿ-ಎಸ್ಟಿ, ಸೆಲ್ ಮುಖ್ಯಸ್ಥ ಡಾ.ಪ್ರದೀಪ.ಚವಾಣ್, ಹಾಗೂ ಒಬಿಸಿ ಮೈನಾರಿಟಿ ಸೆಲ್ ಮುಖಸ್ಥ ಡಾ.ಎಸ್.ಡಿ.ಲಮಾಣಿ, ಪ್ರೊ.ಪ್ರಭಾವತಿ ತಳವಾರ, ಪ್ರೊ.ಬಿಲಾಲ್ ಪಾನಿಬಂಧ, ಡಾ.ಧರ್ಮಗುರು ಪ್ರಸಾದ್, ಪ್ರೊ.ಪವನ್ ಮಹೀಂಧ್ರಕರ, ಮಲಿಕ್ ಎಲ್.ಜಮಾದಾರ, ಪ್ರೊ.ಎಸ್.ವೈ.ಅಂಗಡಿ, ಪಲ್ಲವಿ ಜಾಗಿರದಾರ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

