ಉದಯರಶ್ಮಿ ದಿನಪತ್ರಿಕೆ
ಇಂಡಿ: ಇಂದು ಕೃಷಿ ಗೊಬ್ಬರ ದಾಸ್ತಾನು ಮಳಿಗೆಗಳಿಗೆ ಕೃಷಿ ಉಪ ನಿರ್ದೇಶಕ ಚಂದ್ರಕಾAತ ಪವಾರ ಇವರ ನೇತೃತ್ವದಲ್ಲಿ ಭೇಟಿ ನೀಡಿದರು.
ಎ.ಸಿ.ಧನಶೆಟ್ಟಿ, ಶಾಂತು ಧನಶೆಟ್ಟಿ ಮತ್ತು ಪ್ರಕಾಸಗೌಡ ಬಿರಾದಾರ ಇವರ ಮಳಿಗೆಗಳಿಗೆ ಭೇಟಿ ನೀಡಿದರು.
ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ಸಂಗ್ರಹವಿದೆ. ಸರಿಯಾದ ದರಕ್ಕೆ ಗೊಬ್ಬರ ನೀಡಬೇಕು. ದರ ಪಟ್ಟಿ ಪ್ರಕಟಿಸಬೇಕು. ಅವಧಿ ಮುಗಿದ ಗೊಬ್ಬರ ನೀಡಬಾರದು. ಅಂತಹ ಪ್ರಕರಣ ರೈತರಿಂದ ಬಂದರೆ ಕ್ರಮ ಕೈಕೊಳ್ಳಲಾಗುವದು.
ಸರಕಾರ ನಿಗದಿ ಪಡಿಸಿದ ದರಕ್ಕೆ ಕೃಷಿ ಪರಿಕರ ನೀಡಬೇಕು. ಸ್ಟಾಕು ಲಗ್ತಿಸಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ಕೃಷಿ ಅಧಿಕಾರಿ ಮಹಾಂತೇಶ ಶೆಟ್ಟೆನ್ನವರ ಮತ್ತಿತರಿದ್ದರು.

