ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆಗೆ ಒಂದು ಟಿಎಂಸಿ ನೀರು ಹರಿಯ ಬಿಡಲಾಗಿದೆ ಎಂದು ಇಂಡಿಯ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ತಿಳಿಸಿದ್ದಾರೆ.
ವಿಭಾಗೀಯ ಆಯುಕ್ತರು ಕಲಬುರಗಿ ವಿಭಾಗ ಇವರು ಬೆಳಗಾವಿ ವಿಭಾಗೀಯ ಆಯುಕ್ತರ ಕೋರಿಯ ಮೇರೆಗೆ ನಾರಾಯಣ ಜಲಾಶಯದಿಂದ ಒಂದು ಟಿ.ಎಂ.ಸಿ ನೀರನ್ನು ಹರಿಸಿದ್ದಾರೆ.
ಕೆಬಿಜೆಎನ್‌ಎಲ್ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ, ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು ಮತ್ತು ನಾಗಠಾಣದ ಶಾಸಕ ವಿಠ್ಠಲ ಕಟಕದೊಂಡ ಇವರ ಪ್ರಯತ್ನದಿಂದ ನೀರು ಪಡೆಯಲಾಗಿದೆ.
ನೀರು ಈಗಾಗಲೇ ಏ. ೧೧ ರಿಂದ ಕೃಷ್ಣಾ ಕಾಲುವೆಯಲ್ಲಿ ಹರಿಯುತ್ತಿದ್ದು ಒಂದು ಟಿಎಂಸಿ ಹೆಚ್ಚುವರಿ ನೀರಿನಿಂದ ಏ. ೨೩ ರ ವರೆಗೆ ನೀರು ಕಾಲುವೆಯಲ್ಲಿ ಹರಿಯುತ್ತದೆ ಮತ್ತು ಈ ನೀರು ಕೇವಲ ಕುಡಿಯಲು ಮತ್ತು ಜನ ಜಾನುವಾರುಗಳು ಮಾತ್ರ ಉಪಯೋಗಿಸಲು ತಿಳಿಸಿದ್ದಾರೆ.
ಇಂದು ಕೃಷ್ಣಾ ಕಾಲುವೆ ಮೇಲೆ ಕಂದಾಯ ಉಪವಿಬಾಗಾಧಿಕಾರಿಗಳು ಬೇಟಿ ನೀಡಿ ಸಾಲೋಟಗಿಯಿಂದ ಮಾವಿನಹಳ್ಳಿಯ ವರೆಗೆ ಕಾಲುವೆಯನ್ನು ವಿಕ್ಷಿಸಿದರು.
ಇಒ ಭೀಮಾಶಂಕರ ಕನ್ನೂರ ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ, ಕೆಬಿಜೆಎನ್‌ಎಲ್ ಭೀರಪ್ಪ ಪೂಜಾರಿ ಮತ್ತಿತರಿದ್ದರು.

