ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕೊಪ್ಪಳ ಗವಿಮಠದ ಪ ಪೂ ಶ್ರೀ ಗವಿಸಿದ್ಧೆಶ್ವರ ಶ್ರೀಗಳು ಪಾವನ ಸಾನಿದ್ಯ ವಹಿಸಿ ಮಾರ್ಚ್ 22 ರಂದು ರವಿವಾರ ಸಂಜೆ 4 ಗಂಟೆಗೆ ತಾಲೂಕಿನ ರೋಣಿಹಾಳ ಗ್ರಾಮದ ಶ್ರೀ ಎಡೆಯೂರ ಸಿದ್ಧಲಿಂಗೇಶ್ವರ ಪೂರ್ವ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದು ರೋಣಿಹಾಳ ಶ್ರೀ ಎ ಸಿ ವಿ ವ ಸಂಘದ ಅಧ್ಯಕ್ಷ ರಮೇಶ ಬಿರಾದಾರ ತಿಳಿಸಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿ ಕಾಖಂಡಕಿ ಗುರುದೇವಾಶ್ರಮದ ಪ ಪೂ ಶಿವಯೋಗೀಶ್ವರ ಸ್ವಾಮೀಜಿ ಜ್ಯೋತಿಯನ್ನು ಬೆಳಗಿಸಲಿದ್ದಾರೆ. ಸಾನಿದ್ಯವನ್ನು ರೋಣಿಹಾಳದ ವೇ ಮೂ ರಾಜಶೇಖರಯ್ಯ ಹಿರೇಮಠ, ವೇ ಮೂ ರಾಚೋಟಯ್ಯ ಹಿರೇಮಠ, ವೇ ಮೂ ಮಹಾಂತಯ್ಯ ಮಠಪತಿ ವಹಿಸುವರು. ಅಧ್ಯಕ್ಷತೆಯನ್ನು ಶ್ರೀ ಎ ಸಿ ವಿ ವ ಸಂಘದ ಅಧ್ಯಕ್ಷ ರಮೇಶ ಮಮದಾಪೂರ ವಹಿಸುವರು. ಮುಖ್ಯ ಅತಿಥಿಗಳಾಗಿ ಗ್ರಾಮದ ಗಣ್ಯವ್ಯಕ್ತಿಗಳಾದ ಶರಣುಸಾವುಕಾರ ನ್ಯಾಮಗೌಡ್ರ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಗ್ರಾಮದ ಗಣ್ಯರು ಭಾಗವಹಿಸುವರು. ಕಾರಣ ಸುತ್ತಮುತ್ತಲಿನ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಬೇಕೆಂದು ಕೊರಿದ್ದಾರೆ.

