ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮನೆಯೇ ಮೊದಲ ಪಾಠಶಾಲೆ, ತಾಯಿ ಮೊದಲ ಗುರು ಎನ್ನುವಂತೆ, ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರಗಳ ಮೌಲ್ಯಧಾರಣೆ ಮಾಡುವಲ್ಲಿ ತಾಯಿ ಪಾತ್ರ ಅಮೂಲ್ಯವಾದುದು. ಪ್ರತಿ ಕುಟುಂಬ, ಸಮಾಜ ಮತ್ತು ರಾಷ್ಟ್ರ ಅಭಿವೃದ್ಧಿ ಸಾಧಿಸಬೇಕಾದರೆ, ಮಹಿಳೆಯರ ಪಾತ್ರ ಪ್ರಮುಖವಾಗಿದೆ. ನಮಗೆಲ್ಲ ಕಿತ್ತೂರು ಚೆನ್ನಮ್ಮ, ಓನಕೆ ಒಬ್ಬವ್ವ, ಝಾನ್ಸಿ ರಾಣಿ ಲಕ್ಷ್ಮಿ, ಜೀಮಾ ಮಾತಾ ಇವರಲ್ಲರ ರಾಷ್ಟ್ರಭಕ್ತಿ-ದೇಶಪ್ರೇಮ ನಮಗೆಲ್ಲ ಆದರ್ಶವಾಗಬೇಕು ಎಂದು ಎಕ್ಸಲಂಟ್ ಕಾಲೇಜಿನ ಪ್ರಾಚಾರ್ಯ ಶ್ರೀ ಮಂಜುನಾಥ ಜುನಗೊಂಡ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯ ಅಲ್-ಅಮೀನ ಆಸ್ಪತ್ರೆಯ ಎದುರಿಗೆ ಇರುವ ಲಕ್ಷ್ಮಿ ದೇವಸ್ಥಾನದ ೩ ನೇಯ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ “ಆಧುನಿಕ ಜಗತ್ತಿನಲ್ಲಿ ಸಂಸ್ಕೃತಿ-ಸAಸ್ಕಾರ ಉಳಿಸುವಲ್ಲಿ ಮಹಿಳೆಯರ ಪಾತ್ರ” ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ನಮ್ಮ ಜನಪದ ಸಂಸ್ಕೃತಿ ಶ್ರೀಮಂತವಾಗಿದ್ದು, ಜಾನಪದ, ಒಗಟು, ಕಲೆ, ಸಂಸ್ಕೃತಿ, ಹಾಸ್ಯ, ಬೀಸುವ ಕಲ್ಲಿನ ಪದ ಮತ್ತು ಗರತಿ ಹಾಡುಗಳ ನಮ್ಮ ಭವ್ಯ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿವೆ. ಇಂದಿನ ನಾಗರಿಕ ಅಕ್ಷರ ಜಗತ್ತಿನಲ್ಲಿಯೂ ಕೂಡಾ ಜನಪದ ಹಾಡುಗಳು ಉಳಿದಿವೆ ಎಂದರೆ ಅವಳ ಶ್ರೇಷ್ಠತೆಯೇ ಕಾರಣ ಎಂದು ಹೇಳಿದರು. ಇಂದಿನ ಆಧುನಿಕ ಯುಗದಲ್ಲಿ ಯುವ ಜನತೆ ಮೋಬೈಲ್ ಎಂಬ ಫೋಬಿಯಾದಲ್ಲಿ ಅಮೂಲ್ಯವಾದ ಸಮಯವನ್ನು ವೃಥಾ ಕಾಲಹರಣ ಮಾಡುತ್ತಿರುವದು ಆತಂಕಕಾರಿ ಸಂಗತಿ. ಯುವಜನತೆ ಬದುಕಿನ ಮೂಲ ಬೇರು ಎಂದೇ ಕರೆಸಿಕೊಳ್ಳುವ ಜನಪದ ಸಂಸ್ಕೃತಿಯನ್ನು ತಿಳಿದುಕೊಂಡು ಸಾಹಿತ್ಯಾಭಿಮಾನವನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು. ತಾಯಂದಿರು ಮಕ್ಕಳಲ್ಲಿ ಭಗತಸಿಂಗ್, ಸುಭಾಸಚಂದ್ರ ಭೋಸ ಮತ್ತು ಸ್ವಾಮಿ ವಿವೇಕಾನಂದರ ರಾಷ್ಟçಭಕ್ತಿ ಮತ್ತು ದೇಶಕ್ಕಗಿ ಸಮರ್ಪಣಾ ಭಾವದಂತಹ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಣೆ ಮಾಡಬೇಕಾಗಿದೆ. ನಮ್ಮಂತೆ ಸಾಮಾನ್ಯರಾಗಿದ್ದ ಮಹಾ ಪುರುಷರ ತತ್ವ-ಸಿದ್ದಾಂತ, ಜೀವನ-ಮೌಲ್ಯ ಮತ್ತು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ನಾವೆಲ್ಲರೂ ಆದರ್ಶವನ್ನಾಗಿಟ್ಟುಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀ ಎ.ಬಿ.ಬಿರಾದಾರ, ತುಳಜಪ್ಪ ಕಟ್ಟಿಮನಿ, ಬಸವರಾಜ ಅಂಕಲಗಿ, ವಿಠ್ಠಲ ಅಥರ್ಗಾ, ಹಾಗೂ ಪ್ರಫುಲ ನಿಂಬಾಳಕರ ಇನ್ನಿತರರು ಸಹ ವೇದಿಕೆಯ ಮೇಲಿದ್ದರು.
ಈ ಕಾರ್ಯಕ್ರಮದಲ್ಲಿ ಹಿರಿಯರಾದ ಬಸವರಾಜ ಕುಂಬಾರ, ರಾಜಶೇಖರ ಉಮರಾಣಿ, ಪ್ರೊ. ಎಂ.ಎಸ್.ಖೊದ್ನಾಪೂರ, ಡಾ. ರಾಜಕುಮಾರ ಜೊಳ್ಳಿ, ಕಲಾವತಿ ಬಿದರಿ, ವಿಜಯಲಕ್ಷ್ಮಿ ಪಾಟೀಲ, ಶಾಲಿನಿ ಹೂಗಾರ, ಅಂಬಿಕಾ ರಜಪೂತ, ಸರೋಜಾ ಬಾಗಲಕೋಟ, ಲಕ್ಷ್ಮಿ ಕುಂಬಾರ, ಕೀರ್ತಿ ಮಠಪತಿ, ಭವಾನಿ ಜಾಧವ ಇನ್ನಿತರರು ಸಹ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ನವರಸಪುರದ ವಿವಿಧ ಬಡಾವಣೆಗಳ ಮಕ್ಕಳು, ಮಹಿಳೆಯರು, ಯುವಕರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

