ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅವಿಭಕ್ತ ಕುಟುಂಬಗಳು ನೈತಿಕ ಮೌಲ್ಯ ಕಾಪಾಡಿಕೊಂಡಿದ್ದವು. ಕೌಟುಂಬಿಕ ಸೌಹಾರ್ದ ಸಂಬಂಧಗಳು ಗಟ್ಟಿಯಾಗಿದ್ದವು. ಅವಿಭಕ್ತ ಕುಟುಂಬದಲ್ಲಿ ಮಾನವೀಯ ಸದ್ಗುಣಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಮಾದರಿಯ ಜೀವನ ನಡೆಸುತ್ತಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ ಸಂಜೆ ಅಥಣಿ ರಸ್ತೆಯ ನವರಸಪೂರ ಸೇನಾ ನಗರದಲ್ಲಿ ಮೂರನೇ ವಷ೯ದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ನಿಮಿತ್ತ ಅವಿಭಕ್ತ ಕುಟುಂಬದ ಮಹತ್ವ ಕುರಿತು ಉಪನ್ಯಾಸ ನೀಡಿದ ಹಾಸಿಂಪೀರ ವಾಲಿಕಾರ ಕುಟುಂಬದ ಹಿರಿಯ ಸದಸ್ಯರಿಗೆ ಗೌರವ, ಕಿರಿಯ ಸದಸ್ಯರಿಗೆ ವಾತ್ಸಲ್ಯ ಹಾಗೂ ಸಾಮೂಹಿಕ ಬೋಜನ.ಕುಟುಂಬದ ಅಭಿಮಾನ ಹಾಗೂ ಕುಟುಂಬದಲ್ಲಿ ಅನೇಕ ಜನ ಸಹೋದರರು. ಮಕ್ಕಳು ಅನ್ಯೋನ್ಯತೆಯಿಂದ ಬದುಕುತ್ತಿದ್ದರು ಇಂದು ವಿಭಕ್ತ ಕುಟುಂಬದಲ್ಲಿ ಗಂಡ ಹೆಂಡತಿ ಮಾತ್ರ ಇದ್ದು ತಮ್ಮ ಮಕ್ಕಳೊಂದಿಗೆ ಬದಕುತ್ತಿದ್ದಾರೆ ಎಂದರು
ಶಿಕ್ಷಣ ಇಲಾಖೆಯ ವಿಶ್ರಾಂತ ಅಧಿಕಾರಿ ಎಸ್ ಎಲ್ ಇಂಗಳೇಶ್ವರ ಮುಖ್ಯ ಅತಿಥಿಯಾಗಿ ಮಾತನಾಡಿ ಗ್ರಾಮೀಣ ಪ್ರದೇಶದ ಜನರೆಲ್ಲರೂ ಅವಿಭಕ್ತ ಕುಟುಂಬದಲ್ಲಿ ಬೆಳೆದು ದೊಡ್ಡವರಾದವರು. ನಗರೀಕರಣ ಬೆಳೆದಂತೆ ಗ್ರಾಮೀಣರು ನಗರಕ್ಕೆ ಬಂದರು. ಉದ್ಯೋಗಸ್ಥರು ನಗರದಲ್ಲಿಯೆ ವಾಸವಾಗಿದ್ದರಿಂದ ಅವಿಭಕ್ತ ಕುಟುಂಬಗಳ ಸಂಖ್ಯೆ ಕುಂಟಿತಗೊAಡಿತು ಎಂದರು.
ವಿಶ್ರಾಂತ ಪ್ರಾಚಾರ್ಯ ಡಿ ಎಂ ಮಾತನಾಡಿ ನಾವೆಲ್ಲರೂ ಅವಿಭಕ್ತ ಕುಟುಂಬದಲ್ಲಿ ಜನಸಿದ್ದರಿಂದ ಎಲ್ಲ ಭಾಷಿಕರೊಂದಿಗೆ ಹಾಗೂ ಧಮ೯ಗಳೊಂದಿಗೆ ಬೆರೆತು ಜೀವನ ಮಾಡುವ ಸಾಮರ್ಥ್ಯ ದೊರಕಿತು ಎಂದರು.
ಗುರುಬಸಯ್ಯ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು.ಶಿವಪ್ಪ ಉಕ್ಕಲಿ ವೇದಿಕೆಯ ಮೇಲಿದ್ದರು. ನಿಂಗಪ್ಪ ನಿಂಬಾಳಕರ. ವಿಠ್ಠಲ ಕನಮಡಿ ಸಂಪತ ಕುಲಕಣಿ೯.ಎ ಬಿ ಬಿರಾದಾರ. ಸಾವಿತ್ರಿ ಹೀರೇಮಠ. ಶೋಭಾ ಚವ್ವಾಣ. ವೈಶಾಲಿ ಕಾಮಗೋಳ. ಭಾರತ್ ಪಾಟೀಲ. ಲಕ್ಷ್ಮಿ ಮಠ. ಭಾರತಿ ಕಿಚಡಿ.ಶಿವಾನಂದ ಹಡಪದ. ಬಸವರಾಜ ಕುಂಬಾರ ವಿಠ್ಠಲ ಜಗತಾಪ. ರಾಜುಕುಮಾರ ಜೊಲ್ಲೆ. ರಾಜಶೇಖರ ಉಮರಾಣಿ. ಶಾಂತಾ ಕಪಾಳೆ. ಶಾಕುಂತಲ ಅಂಕಲಗಿ. ಸಿದ್ದಲಿಂಗಮ್ಮ ಒತಿಹಾಳ ಮುಂತಾದವರು ಉಪಸ್ಥಿತರಿದ್ದರು.
ಕಾಶಿಲಿಂಗ ಶೇಘಾವಿ ಅನ್ನ ಪ್ರದಾನ ಸೇವೆ ಮಾಡಿದರು.

