ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಒಟ್ಟು ೧೦೭ ಪ್ರಕರಣಗಳನ್ನು ೨ ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಲೋಕ ಅದಾಲತ್ ನಲ್ಲಿ ಇತ್ಯರ್ಥ ಪಡಿಸಿದ್ದು, ಒಟ್ಟು ೩೧೧೧೬೫೪ ರೂ. ಗಳನ್ನು ದಂಡದ ರೂಪದಲ್ಲಿ ಭರಿಸಿದೆ.
ಹೆಸ್ಕಾಂ ಜಾಗೃತದಳದ ಅಧಿಕಾರಿಗಳಾದ ಚಂದ್ರಪ್ಪ ಚಿಕ್ಕೋಡಿ ಪಿಐ ಕೋಟ್ರೆಪ್ಪ ಹರನಾಳ, ಎಇಇ ಸುರೇಖಾ ಗಲಗಲಿ, ಪಿ.ಎಸ್.ಐ ಸಂತೋಷ ರಾಠೋಡ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ, ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು.
