ಉದಯರಶ್ಮಿ ದಿನಪತ್ರಿಕೆ
ಭೈರವಾಡಗಿ(ದೇವರಹಿಪ್ಪರಗಿ): ಗ್ರಾಮದ ಹಿಂದೂ ಸಮುದಾಯದಿಂದ ಇಫ್ತಾರಕೂಟ ಏರ್ಪಡಿಸುವುದರ ಮೂಲಕ ಸೌಹಾರ್ದತೆ ಸಾರಲಾಯಿತು.
ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ರೈತಸಂಘದ ಉತ್ತರ ಕರ್ನಾಟಕ ಭಾಗದ ಅಧ್ಯಕ್ಷ ಶಂಕರಗೌಡ ಹಿರೇಗೌಡರ ನೇತೃತ್ವದಲ್ಲಿ ಮಂಗಳವಾರ ರಂಜಾನ್ ಅಂಗವಾಗಿ ಜರುಗಿದ ಇಫ್ತಾರಕೂಟದಲ್ಲಿ ಮುಸ್ಲಿಂ ಹಾಗೂ ಹಿಂದೂ ಸಮುದಾಯಗಳ ಪ್ರಮುಖರು ಭಾಗವಹಿಸಿ ಉಪಹಾರ ಸೇವಿಸಿ ಸಾಮರಸ್ಯ ಮೆರೆದರು.
ಮಂಜುನಾಥ ಹಿರೇಮಠ, ಶರಣಯ್ಯ ಹಿರೇಮಠ, ರಾಮು ಬೊಮ್ಮನಳ್ಳಿ, ಸಾಹೇಬಗೌಡ ಉತ್ನಾಳ, ರಜಾಕ್ ಶಾಬಾದಿ, ಸೋಮನಗೌಡ ಬಿರಾದಾರ, ನಾನಾಗೌಡ ಪಾಟೀಲ, ಅಬ್ದುಲ್ ಬಳಗಾನೂರ, ಹಣಮಂತ ಡಂಬಳ, ಶಿವು ಉತ್ನಾಳ, ಯಮನೂರಿ ಬಿರಾದಾರ, ರವಿಗೌಡ ಪಾಟೀಲ, ಶೇಖು ಕಿರಣಗಿ, ಭೀಮನಗೌಡ ಲಚ್ಯಾಣ, ಈರಣ್ಣಗೌಡ ಪಾಟೀಲ ನೇತೃತ್ವ ವಹಿಸಿದ್ದರು.

