ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಧರ್ಮ-ಜಾತಿ ಭೇದಭಾವವಿಲ್ಲದೆ ಸಹಾಯ ಮಾಡುವ ಮನೋಭಾವ ಪಾರಥನಳ್ಳಿ ಪರಿವಾರದ ಅತ್ಯಂತ ಮುಖ್ಯ ಕಾರ್ಯ ಎಂದು ಡಿ.ವಾಯ್.ಎಸ್.ಪಿ ಸಯ್ಯದ ರೋಷನ್ ಜಮೀರ್ ಹೇಳಿದರು.
ನಗರದ ಮಾಮನ ರಸಿದ ಪಾರಥನಳ್ಳಿ ಅವರ ಹಾರ್ಡ್‌ವೇರ್ ಅಂಗಡಿಯಲ್ಲಿ ರಮಝಾನ್ ಹಬ್ಬದ ಪ್ರಯುಕ್ತ ಬಡವರಿಗೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಹಿಂದೂ-ಮುಸ್ಲಿಂ ಎನ್ನದೆ ಎಲ್ಲರಿಗೂ ಸಹಾಯ ಮಾಡುವ ಮನಸ್ಸು ನಮ್ಮಲ್ಲಿರಬೇಕು. ಪರಸ್ಪರ ಸಹಕಾರದಿಂದಲೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ” ಎಂದರು.
ಅಂಜುಮನ್-ಎ-ಇಸ್ಲಾಂ ಸಮಿತಿಯ ಅಧ್ಯಕ್ಷ ತೌಫಿಕ್ ಪಾರಥನಳ್ಳಿ ಮಾತನಾಡಿ, ಬಡವರ ಏಳಿಗೆಗಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದರು.
ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಮಾಮೂನ ರಸಿದ ಪಾರಥನಳ್ಳಿ ಮಾತನಾಡಿ, “ಹಬ್ಬ ಎಂದರೆ ಕೇವಲ ಹಣ ಅಥವಾ ಬಟ್ಟೆ ಕೊಡುವುದಲ್ಲ, ಬಡವರ ಜೊತೆ ನಿಲ್ಲುವುದು ಮತ್ತು ಸಂತೋಷ ಹಂಚಿಕೊಳ್ಳುವುದೇ ನಿಜವಾದ ಹಬ್ಬ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಮಾರು 2500 ಕಿಟ್‌ಗಳು (ಧಾನ್ಯ, ಕುಕ್ಕರ್, ಗ್ಯಾಸ್ ಸ್ಟವ್, ಇಸ್ತ್ರಿ, ಮಿಕ್ಸರ್ ಸೇರಿದಂತೆ ಇತರೆ ಸಾಮಗ್ರಿಗಳನ್ನು ವಿತರಿಸಲಾಯಿತು.
ಸಲ್ಮಾನ್ ಪಾರಥನಳ್ಳಿ, ನಜೀರ್ ಕಂಗನೋಳ್ಳಿ, ಕಾಡು ಮಾಳಿ ಮಾತನಾಡಿದರು.
ಅಬುಬಕ್ಕರ ಕುಡಚಿ ನಿರೂಪಿಸಿ ವಂದಿಸಿದರು.
ಉದ್ದಿಮೆದಾರ ಈಸಾಕ್ ನಿಪ್ಪಾಣಿ, ಪ್ರದೀಪ ಮಹಾಲಿಂಗಪುರಮಠ, ಉಸ್ಮಾನ್ ಜಾಗಿರದಾರ್, ಮುಸ್ತಾಕ್ ಝಂಡೆ ಸೇರಿದಂತೆ ಇನ್ನಿತರರು ಇದ್ದರು.

