ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಅಭಿಮತ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಹಿಳಾ ಸಬಲೀಕರಣಕ್ಕೆ ಸರ್ಕಾರ ಜಾರಿಗೊಳಿಸಿದ ವಿವಿಧ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಸಶಕ್ತಳಾಗಬೇಕು ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಹೇಳಿದರು.
ಪಟ್ಟಣದ ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ನೈರ್ಮಲ್ಯ ನಿರ್ವಹಣೆಯಲ್ಲಿ ತೊಡಗಿರುವ ಸ್ವಸಹಾಯ ಗುಂಪುಗಳ ಸಾಮಾರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಇಂದು ಎಲ್ಲ ರಂಗಗಳಲ್ಲಿ ಸುಶಿಕ್ಷಿತಳಾಗಿ, ಸಮರ್ಥಳಾಗುವುದರ ಮೂಲಕ ಅತ್ಯಂತ ಮುಂಚೂಣಿ ಪಾತ್ರ ವಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಜೆಎಮ್‌ಜೆ ಸ್ವಯಂಸೇವಾ ಸಂಸ್ಥೆಯ ಶಾಂತಾ ದೇಗಿನಾಳ ಹಾಗೂ ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಈಳಗೇರ ಮಾತನಾಡಿ, ಬದಲಾದ ಜಗತ್ತಿನಲ್ಲಿ ದೇಶದ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವದು ಹೆಮ್ಮೆಯ ವಿಷಯ. ಅದರಲ್ಲೂ ಶಿಕ್ಷಣ, ವೈದ್ಯಕೀಯ, ವಿಜ್ಞಾನ ತಂತ್ರಜ್ಞಾನದಲ್ಲಿ ಮಹಿಳೆಯರ ಸಾಧನೆ ಅಮೋಘವಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಸಿಬ್ಬಂದಿ ಎಸ್.ಸಿ.ಹಿರೇಮಠ, ರೇಣುಕಾ ಬಿರಾದಾರ, ಎಸ್.ಎಸ್.ಪೂಜಾರಿ, ಶಿಕ್ಷಕಿ ಇಂದುಮತಿ ಕೋಟಿನ್, ಅಂಗನವಾಡಿ ಕಾರ್ಯಕರ್ತೆ ಗುರುಬಾಯಿ ಕೋಟಿನ್, ಸಮುದಾಯ ಸಂಘಟಕಿ ಭುವನೇಶ್ವರಿ ಸಣ್ಣಕ್ಕಿ, ಅಂಬಿಕಾ ಕುಲಕರ್ಣಿ ಸೇರಿದಂತೆ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಇದ್ದರು.

