ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗ್ರಾಮದ ಮೂರು ದಿನಗಳ ಚಿರಾಕಿ ನಸ್ರೂದ್ದೀನ್ ಉರುಸ್‌ನ್ನು ಶಾಂತಿ, ಸಹನೆ, ಸಹಕಾರದಿಂದ ಆಚರಿಸಬೇಕು ಎಂದು ಪಿಎಸೈ ಸಚೀನ ಆಲಮೇಲಕರ ಹೇಳಿದರು.
ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದಲ್ಲಿ ಸೋಮವಾರ ಜರುಗಿದ ಶಾಂತಿಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮ ಶಾಂತಿ ಸೌಹಾರ್ದತೆಗೆ ಹೆಸರಾಗಿದೆ. ಇಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲ. ಎಲ್ಲರೂ ಶಾಂತಿ, ಸಹನೆ ಯಿಂದ ಉರುಸ್ ಆಚರಣೆಗೆ ಸಹಕಾರ ನೀಡಬೇಕು ಅಹಿತಕರ ಘಟನೆಗಳು ಜರುಗದಂತೆ ಪ್ರತಿಯೊಬ್ಬರು ನಡೆದುಕೊಳ್ಳಬೇಕು ಎಂದರು.
ಗ್ರಾಮಸ್ಥರ ಪರವಾಗಿ ಕಾಂಗ್ರೆಸ್ ಧುರೀಣ ಸಾಯಿಕುಮಾರ ಬಿಸನಾಳ ಮಾತನಾಡಿದರು.
ಸಭೆಯಲ್ಲಿ ಸಂಗನಗೌಡ ಪಾಟೀಲ, ವಿಠ್ಠಲ ದೇಗಿನಾಳ, ಸೋಮನಗೌಡ ಪಾಟೀಲ ಸಿದ್ಧನಗೌಡ ಬಿರಾದಾರ, ಕಾಂತು ಕನ್ನೋಳ್ಳಿ, ಹಣಮಂತ ಗಣಜಲಿ, ಸಾಯಬಣ್ಣ ಮಸಳಿ, ಕಮಲ್‌ಸಾಬ್ ಚಿಕ್ಕರೂಗಿ, ನಬಿಸಾಬ್ ಮುಲ್ಲಾ, ಕಲ್ಲಪ್ಪ ಚೌಧರಿ, ಸಿದ್ದು ಗಂಗನಳ್ಳಿ, ರಮೇಶ ಕುಂಬಾರ ಇದ್ದರು.

