ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಕ್ಕಳಿಗೆ ಶಿಕ್ಷಣ ಒಂದು ಅಮೂಲ್ಯ ರತ್ನ ಇದ್ದಂತೆ. ಶೈಕ್ಷಣಿಕ ಅಭಿವೃದ್ದಿಯಿಂದ ಏನೆಲ್ಲಾ ಬದಲಾವಣೆ ಮಾಡುವಂತ ಶಕ್ತಿ ಇದೆ. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜೊತೆ ಮಾನವೀಯ ಮೌಲ್ಯಗಳನ್ನು ನೀಡಿ ಭಾವಿ ಭವಿಷ್ಯತ್ತಿನ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಕೆ. ಬಿರಾದಾರ ಹೇಳಿದರು.
ಮಂಗಳವಾರ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದ ಸಕರ್ಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್.ಡಿ.ಎಮ್.ಸಿ ಅಧ್ಯಕ್ಷ ಸಿದ್ದು ಹತ್ತಳ್ಳಿ ಅಧ್ಯಕ್ಷತೆ ವಹಿಸಿದರು, ಮುಖ್ಯ ಅತಿಥಿಗಳಾಗಿ ಜಿ.ಎ.ದುದಗಿ, ಜಿ.ಎಸ್.ಬಂದಿ, ಎಸ್.ಆರ್. ಭೋಸಲೆ, ಎಸ್.ವ್ಹಿ.ಮುಂಜಿ, ಸದಾಶಿವ ಅಂಬಾರೆ, ಎಸ್.ಜಿ.ಬಾಣಿಕೊಲ, ಜೋತಿ ಕನ್ನೂರ, ಎಸ್.ಎಸ್. ಖೇಡದ, ಎ.ಎಸ್.ಹರವಾಳ, ಉಪಾಧ್ಯಕ್ಷ ವಿಠ್ಠಲ ಹೋತರ್ಿ, ಮತ್ತು ಎಸ್.ಡಿ.ಎಮ್.ಸಿ. ಸದಸ್ಯರು ಸೇರಿದಂತೆ ಶಿಕ್ಷಕ ಸಿಬ್ಬಂದಿ ವೇದಿಕೆಯಲ್ಲಿದ್ದರು.
ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

