ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಸತತವಾಗಿ ಮೂವತ್ತು ವರ್ಷಗಳಿಂದ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕಾಗಿ ಪಾದಯಾತ್ರೆ ಮೂಲಕ ತೆರಳಿ ತಮ್ಮ ಭಕ್ತಿಯ ಸೇವೆ ಸಲ್ಲಿಸುತ್ತಾ ಬಂದಿರುವ ಗ್ರಾಮದ ಸೋಮಶೇಖರ ಸಜ್ಜನ ಅವರನ್ನು ಮುಸ್ಲಿಂ ಬಾಂಧವರು ಸೇರಿಕೊಂಡು ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸುವ ಮೂಲಕ ಶುಭ ಕೋರಿದರು. ಈ ವೇಳೆ ನಬಿಲಾಲ ಬಡೆಮ್‌ಗೋಳ, ಆರೀಫಪಾಶಾ ಕೆಂಭಾವಿ, ರಜಾಖ ಬಳಿಗಾರ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮಹಿಮೂದ ಕೆಂಭಾವಿ, ಬಸಪ್ಪ ರಕ್ಕಸಗಿ, ಸಿದ್ದಪ್ಪ ಕುದರಕಾರ, ಅಣ್ಣಪ್ಪಗೌಡ ಯಾಳವಾರ, ಮಲ್ಲಿಕಾರ್ಜುನ ರಕ್ಕಸಗಿ, ಸಂತೋಷ ರಕ್ಕಸಗಿ, ಗುರಲಿಂಗಪ್ಪ ಸಜ್ಜನ ಸೇರಿದಂತೆ ಇತರರು ಇದ್ದರು.

