ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕೆಲಸವನ್ನು ಮಾತ್ರ‍್ರ ಮಾಡದೇ ದೇಶದ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಸಹ ನಿರ್ವಹಿಸುತ್ತವೆ ಎಂದು ವೈದ್ಯ ಎಸ್.ಎಸ್.ಮುತ್ತತ್ತಿ ಹೇಳಿದರು.
ಪಟ್ಟಣದ ಮಾದಿನಾಳ ಕ್ರಾಸ್ ಬಳಿ ಇರುವ ಸಮರ್ಥ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯ ೭ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮರ್ಥ ಶಾಲೆ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳು, ಸಮಾಜದ ಹೊಣೆಗಾರಿಕೆ ಮತ್ತು ದೇಶಭಕ್ತಿ ಭಾವನೆಯನ್ನು ಬೆಳೆಸುವ ಕಾರ್ಯವನ್ನು ಸಮರ್ಪಕವಾಗಿ ಮಾಡುತ್ತಿರೋದು ಹೆಮ್ಮೆಯ ವಿಷಯ ಎಂದರು.
ಮುಖ್ಯ ಅತಿಥಿಯಾಗಿದ್ದ ಶಿಕ್ಷಕ ಎಂ.ಎ.ತಳ್ಳಿಕೇರಿ ಅವರು ಮಾತನಾಡಿ, ಓಡುತ್ತಿರುವ ದಿನಮಾನಗಳಲ್ಲಿ ಕೆಲವೇ ಮಕ್ಕಳಿಂದ ಪ್ರಾರಂಭವಾದ ಈ ಶಾಲೆ, ಸಧ್ಯ ಉತ್ತಮ ಪರಿಸರ, ಬೃಹತ್ ಕಟ್ಟಡ, ಸುಭದ್ರ ಕೊಠಡಿಗಳು, ವಿಶಾಲವಾದ ಹಸಿರಿನಿಂದ ಕೂಡಿದ ಮೈದಾನ, ಅಚ್ಚುಕಟ್ಟಾದ ಕಂಪೌಂಡ್ ನ ಮೂಲಕ ಬೆಳೆದು ನಿಂತಿದೆ ಅಂದರೆ ಅದಕ್ಕೆ ಶಾಲಾ ಮುಖ್ಯಸ್ಥರ ಸೇವಾ ಮನೋಭಾವನೆ ಮತ್ತು ಕಠಿಣ ಪರಿಶ್ರಮವೇ ಕಾರಣ. ಬರುವ ದಿನಗಳಲ್ಲಿ ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಶಾಲೆಯ ಸಂಸ್ಥಾಕ ಅಧ್ಯಕ್ಷ ಪರಶುರಾಮ ಎಚ್.ಎಲ್ ಮಾತನಾಡಿ ಶಾಲೆ ಬೆಳೆದುಬಂದ ಹಾದಿಯ ಬಗ್ಗೆ ವಿವರಿಸಿದರು.
ಶಿಕ್ಷಕ ಎಸ್.ಎಸ್.ದೊಡಮನಿ, ಎಎಸ್‌ಐ ಕೆ.ಎಸ್.ಅಸ್ಕಿ ಮಾತನಾಡಿದರು.
ಪತ್ರಕರ್ತ ವಿಕ್ರಂ ವಿರಾದಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಿರಿಯಪ್ಪ ಗುರುಸ್ವಾಮಿ ಜ್ಯೋತಿ ಬೆಳಗಿಸಿದರು.
ಪತ್ರಕರ್ತ ನಾಗೇಂದ್ರ ಶಿವಶಿಂಪಿ, ಕೆಬಿಜೆಎನ್‌ಎಲ್ ಎಇಇ ಅಶೋಕ ಬಿರಾದಾರ, ಶಿವುಲಾಲ ಜಾಧವ, ಗ್ರಾಮ ಲೆಕ್ಕಾಧಿಕಾರಿ ಹರ್ಷಿತಗೌಡ, ನಿವೃತ್ತ ಶಿಕ್ಷಕ ಮಲ್ಲನಗೌಡ ಬಿರಾದಾರ, ಶಿಕ್ಷಕಿ ಎ.ಎಸ್.ಪಾತ್ರೋಟಿ, ಸಮಾಜ ಸೇವಕ ರಾಜಕುಮಾರ ನರಸಣಗಿ, ಸಮಾಜ ಸೇವಕಿ ಸಕ್ಕೂಬಾಯಿ ರಾಠೋಡ, ಪ್ರಕಾಶ ಬಸರಕೋಡ, ಸಂತೋಷ ಕೆಸನೂರ, ಸಿದ್ದು ಕೋಲಕಾರ, ಶಿವನಗೌಡ ಪಾಟೀಲ, ಲಾಡ್ಲೇಮಶಾಕ ಮೂಕಿಹಾಳ, ಮಾಜಿ ಸೈನಿಕ ಸತೀಶ ನಾಯಕ, ರವಿ ಕಲ್ಯಾಣಮಠ, ವಿಜು ಸೋನಾರ, ಶಾಲೆಯ ಮುಖ್ಯೋಪಾದ್ಯಾಯನಿ ಜೆ.ಟಿ.ಗೀತಾಂಜಲಿ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸುವ ಮೂಲಕ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ನಡೆದ ಮನರಂಜನಾ ಕಾರ್ಯಕ್ರಮಗಳು ಗಮನಸೆಳೆದವು.
ಲಾಲಸಿಂಗ ಚವ್ಹಾಣ ಮತ್ತು ಕಿಶನ ರಾಠೋಡ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಶಾಲೆಯ ಸಂಸ್ಥಾಕ ಅಧ್ಯಕ್ಷ ಪರಶುರಾಮ ಎಚ್.ಎಲ್ ನಿರ್ವಹಿಸಿದರು.

