Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ 17,969 ಎಕರೆ ವಕ್ಫ್ ಆಸ್ತಿ ಅತಿಕ್ರಮಣ!

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನ್ಯಾ.ಕೌಶಿಕ್

ಮಾ.೨೪ ರಂದು ಪೂರ್ವಭಾವಿ ಸಭೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಏರಿಕೆ ಕಂಡ ಅಡುಗೆ ಎಣ್ಣೆ ಬೆಲೆ :ಕೃತಕ ಅಭಾವ ಸಾಧ್ಯತೆ
(ರಾಜ್ಯ ) ಜಿಲ್ಲೆ

ಏರಿಕೆ ಕಂಡ ಅಡುಗೆ ಎಣ್ಣೆ ಬೆಲೆ :ಕೃತಕ ಅಭಾವ ಸಾಧ್ಯತೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇರಾನ್ ಮೇಲಿನ ಯುದ್ಧದ ಪರಿಣಾಮ | ತಾಳೆ, ಸೂರ್ಯಕಾಂತಿ ಎಣ್ಣೆ 15 ದಿನಕ್ಕಾಗುವಷ್ಟು ದಾಸ್ತಾನು

ಉದಯರಶ್ಮಿ ದಿನಪತ್ರಿಕೆ

ವರದಿ: ಎಸ್ ಎಮ್ ಇಟ್ಟಿ ಜಮಖಂಡಿ: ಯುದ್ಧದ ಪರಿಣಾಮ, ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಸೂರ್ಯಕಾಂತಿ ಎಣ್ಣೆ, ತಾಳೆ ಎಣ್ಣೆ ಯುದ್ದದಿಂದಾಗಿ ಲಭ್ಯತೆ ಇಲ್ಲ ಎನ್ನಲಾಗ್ತಿದೆ. ಈಗ ಕೇವಲ 15 ದಿನದ ದಾಸ್ತಾನು ಇದೆ ಎನ್ನುತ್ತಿರುವ ವ್ಯಾಪಾರಿಗಳು, ಇನ್ನೊಂದೆಡೆ ಭಾರಿ ಬೆಲೆ ಏರಿಕೆ ಮಾಡಿದ್ದಾರೆ.
ವಿದೇಶಗಳಿಂದ ಕಚ್ಚಾ ತೈಲವಾಗಿ ಆಮದು ಮಾಡಿಕೊಂಡು, ಇಲ್ಲಿ ಶುದ್ಧೀಕರಿಸಿ ಹಾಗೂ ಪ್ಯಾಕಿಂಗ್‌ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಸನ್‌ಫ್ಲವರ್‌ ಎಣ್ಣೆಯ ಕಚ್ಚಾ ತೈಲವನ್ನು ಉಕ್ರೇನ್‌ ಹಾಗೂ ಕೆಲವು ಯೂರೋಪಿನ ರಾಷ್ಟ್ರಗಳಿಂದ ತರಲಾಗುತ್ತದೆ
ಸನ್‌ಫ್ಲವರ್‌ ಎಣ್ಣೆ ಲೀಟರ್‌ಗೆ 165 ರೂ. ಇದ್ದದ್ದು ಈಗ 178 ರೂ.ಗೆ ಏರಿಕೆಯಾಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್‌-ಇಸ್ರೇಲ್‌ ಯುದ್ಧದಿಂದಾಗಿ ದೇಸಿ ಮಾರುಕಟ್ಟೆ ಮೇಲೂ ಪರಿಣಾಮ ಬೀಳಲು ಆರಂಭವಾಗಿದೆ. ಅದರಲ್ಲೂ ಅಡುಗೆ ಎಣ್ಣೆ ಬೆಲೆ ದಿನೇ ದಿನೆ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೊರತೆ ಉಂಟಾಗಿ ಕೃತಕ ಅಭಾವ ಸೃಷ್ಟಿಯಾಗುವ ಭೀತಿ ಎದುರಾಗಿದೆ.
ರಾಜ್ಯದಲ್ಲಿ ತಾಳೆ (ಪಾಮ್‌) ಹಾಗೂ ಸೂರ್ಯಕಾಂತಿ ಎಣ್ಣೆಗಳ ಹೆಚ್ಚಿನ ಪ್ರಮಾಣವು ವಿದೇಶಗಳಿಂದ ಕಚ್ಚಾ ತೈಲವಾಗಿ ಆಮದು ಮಾಡಿಕೊಂಡು, ಇಲ್ಲಿ ಶುದ್ಧೀಕರಿಸಿ ಹಾಗೂ ಪ್ಯಾಕಿಂಗ್‌ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಪಾಮ್‌ ಎಣ್ಣೆಯನ್ನು ಮುಖ್ಯವಾಗಿ ಮಲೇಶಿಯಾ ಹಾಗೂ ಇಂಡೋನೇಷ್ಯಾ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಸನ್‌ಫ್ಲವರ್‌ಎಣ್ಣೆಯ ಕಚ್ಚಾ ತೈಲವನ್ನು ಉಕ್ರೇನ್‌ ಹಾಗೂ ಕೆಲವು ಯೂರೋಪಿನ ರಾಷ್ಟ್ರಗಳಿಂದ ತರಲಾಗುತ್ತದೆ. ಆದರೆ, ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ ಹಾಗೂ ಸಾಗಾಟದ ಅಡಚಣೆಗಳಿಂದಾಗಿ ಈ ಕಚ್ಚಾ ತೈಲದ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಲಕ್ಷಣ ಕಂಡುಬಂದಿದೆ. ಇದರಿಂದಲೇ ಸದ್ಯ ಮಾರುಕಟ್ಟೆಯಲ್ಲಿ ಎಣ್ಣೆ ಬೆಲೆ ಏರಿಕೆಯ ಜತೆಗೆ ಬೇಡಿಕೆ ಹೆಚ್ಚಳವೂ ಕಂಡುಬರುತ್ತಿದೆ.

ಎಣ್ಣೆ ದರದಲ್ಲಿ ಗಮನಾರ್ಹ ಏರಿಕೆ

ಕಳೆದ ವಾರದಲ್ಲಿ ಸನ್‌ಫ್ಲವರ್‌ಎಣ್ಣೆ ಹಾಗೂ ಪಾಮ್‌ ಎಣ್ಣೆ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಹತ್ತು ದಿನದ ಹಿಂದೆ ಸನ್‌ಫ್ಲವರ್‌ಎಣ್ಣೆ ಲೀಟರ್‌ಗೆ 165 ರೂ.ಇದ್ದದ್ದು ಈಗ 178 ರೂ.ಗೆ ಏರಿಕೆಯಾಗಿದೆ. ಅದೇ ರೀತಿ ಪಾಮ್‌ ಎಣ್ಣೆ ಲೀಟರ್‌ಗೆ 134 ರೂ. ಇದ್ದದ್ದು ಈಗ 146 ರೂ.ಗೆ ತಲುಪಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಯುದ್ಧ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ದಾಸ್ತಾನು ಕೇವಲ 15 ದಿನ

ಪ್ರಾದೇಶಿಕ ವಿತರಣೆ ಕೇಂದ್ರಗಳಲ್ಲಿ ಸದ್ಯ 100 ಟನ್‌ ಸನ್‌ಫ್ಲವರ್‌ಎಣ್ಣೆ, 120 ಟನ್‌ ಪಾಮ್‌ ಎಣ್ಣೆ ದಾಸ್ತಾನು ಇದ್ದು, ಇದು ಗರಿಷ್ಠ 15 ದಿನಗಳವರೆಗೆ ಸಾಕಾಗಬಹುದು ಎನ್ನುತ್ತವೆ ಮೂಲಗಳು.
ಕೆಲ ವರ್ಷಗಳ ಹಿಂದೆ ಉಕ್ರೇನ್‌-ರಷ್ಯಾ ಯುದ್ಧದ ಸಂದರ್ಭ ಸನ್‌ಫ್ಲವರ್‌ ಎಣ್ಣೆಯ ಬೆಲೆ ಲೀಟರ್‌ಗೆ 200 ರೂ.ದಾಟಿತ್ತು. ಈಗಲೂ ಅಂತಹ ಪರಿಸ್ಥಿತಿ ಉಂಟಾಗುವ ಭೀತಿ ಮಾರುಕಟ್ಟೆಯಲ್ಲಿ ವ್ಯಕ್ತವಾಗಿದೆ.

” ಒಂದೆಡೆ ಸಿಲಿಂಡರ್‌ ಅಭಾವ ಉಂಟಾಗುತ್ತಿದೆ. ಮತ್ತೊಂದೆಡೆ ಸೂರ್ಯಕಾಂತಿ, ತಾಳೆ ಎಣ್ಣೆ ಬೆಲೆಯೂ ಏರಿಕೆಯಾಗುತ್ತಿದೆ. ಹಾಗಾಗಿ, ನಮ್ಮ ಹೋಟೆಲ್‌ ಗಳಲ್ಲಿ ಮತ್ತು ದಾಬಾಗಳಲ್ಲಿ ಹೆಚ್ಚು ಬೇಡಿಕೆ ಇರುವ ಉಪಾಹಾರವನ್ನು ಮಾತ್ರ ತಯಾರಿಸುವತ್ತ ಗಮನಹರಿಸುವಂತಾಗಿದೆ. ಮುಂಜಾಗ್ರತಾ ಕ್ರಮವಾಗಿ ನಮಗೆ ಅಗತ್ಯವಿರುವಷ್ಟು ಎಣ್ಣೆಯನ್ನು ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ.”

– ಹನಮಂತ ಅಂಬಿ
ದಾಬಾ ಮಾಲಿಕ, ಚಿಕ್ಕಪಡಸಲಗಿ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರಾಜ್ಯದಲ್ಲಿ 17,969 ಎಕರೆ ವಕ್ಫ್ ಆಸ್ತಿ ಅತಿಕ್ರಮಣ!

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನ್ಯಾ.ಕೌಶಿಕ್

ಮಾ.೨೪ ರಂದು ಪೂರ್ವಭಾವಿ ಸಭೆ

ಎಸ್.ಎಸ್.ಎಲ್.ಸಿ ಪರೀಕ್ಷೆ : ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರಾಜ್ಯದಲ್ಲಿ 17,969 ಎಕರೆ ವಕ್ಫ್ ಆಸ್ತಿ ಅತಿಕ್ರಮಣ!
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನ್ಯಾ.ಕೌಶಿಕ್
    In (ರಾಜ್ಯ ) ಜಿಲ್ಲೆ
  • ಮಾ.೨೪ ರಂದು ಪೂರ್ವಭಾವಿ ಸಭೆ
    In (ರಾಜ್ಯ ) ಜಿಲ್ಲೆ
  • ಎಸ್.ಎಸ್.ಎಲ್.ಸಿ ಪರೀಕ್ಷೆ : ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿ
    In (ರಾಜ್ಯ ) ಜಿಲ್ಲೆ
  • ನೌಕರರ ಸಮರ್ಪಕ ಕೆಲಸದಿಂದ ದೇಶದ ಅಭಿವೃದ್ದಿ ಸಾಧ್ಯ
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ದತೆ :ಬಿಇಓ ಸಯಿದಾ ಮುಜಾವರ
    In (ರಾಜ್ಯ ) ಜಿಲ್ಲೆ
  • ಮಾನವ-ಪ್ರಾಣಿ ಸಂಘರ್ಷ ತಡೆಗೆ ಸ್ಥಳೀಯರ ಸಹಕಾರ ಅತ್ಯಗತ್ಯ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ಯಶಸ್ಸು ಕಂಡ ಲೋಕ ಅದಾಲತ್
    In (ರಾಜ್ಯ ) ಜಿಲ್ಲೆ
  • ಪ್ರಗತಿ ಹಂತದ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ
    In (ರಾಜ್ಯ ) ಜಿಲ್ಲೆ
  • ಮಾದರಿ ನೀತಿ ಸಂಹಿತೆ ಜಾರಿಗೆ ಕಾರ್ಯಪ್ರವೃತ್ತ :ಜ್ಯೋತಿಗಿರೀಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.