ಮಾನವ ಅಭಿವೃದ್ಧಿ ವರದಿ-೨೦೨೫ ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ-೨೦೩೧ | ಜಿ.ಪಂ. ಸಿಇಓ ರಿಷಿ ಆನಂದ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಮಾನವ ಅಭಿವೃದ್ಧಿ ವರದಿ-೨೦೨೫ ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ-೨೦೩೧ ವರದಿ ತಯಾರಿಕೆಗೆ ನಿಖರವಾದ ಮತ್ತು ಸ್ಪಷ್ಟವಾದ ದತ್ತಾಂಶಗಳಿಂದ ಕೂಡಿದ ನಿಗಧಿತ ನಮೂನೆಯಲ್ಲಿ ದೃಢೀಕರಿಸಿ, ವಿಳಂಬ ಮಾಡದೇ ನಿಗದಿತ ಕಾಲಾವಧಿಯೊಳಗೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಸೂಚಿಸಿದರು.
ಮಾರ್ಚ್ ೧೩ ರಂದು ಜಿಲ್ಲಾ ಪಂಚಾಯತಿಯ ಸಭಂಗಣದಲ್ಲಿ ನಡೆದ ಜಿಲ್ಲಾ ಮಾನವ ಅಭಿವೃದ್ಧಿ ವರದಿ-೨೦೨೫ ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ-೨೦೩೧ ವರದಿ ತಯಾರಿಸುವ ಕುರಿತು ವಲಯವಾರು ಉಪ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಮಾನವ ಅಭಿವೃದ್ಧಿ ವರದಿ-೨೦೨೫ಕ್ಕೆ ಸಂಬಂಧಿಸಿದಂತೆ ೧೨೬ ಸೂಚ್ಯಾಂಕಗಳ ಪೈಕಿ ೪೭ ಸೂಚ್ಯಾಂಕಗಳ ಮಾಹಿತಿಯನ್ನು ಸಲ್ಲಿಸಿದ್ದು, ಬಾಕಿ ೭೯ ಸೂಚ್ಯಾಂಕಗಳ ಮಾಹಿತಿಯನ್ನು ಸಲ್ಲಿಸಲು ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ-೨೦೩೧ಕ್ಕೆ ಸಂಬಂಧಸಿದಂತೆ ೧೭೬ ಸೂಚ್ಯಾಂಕಗಳ ಪೈಕಿ ೬೯ ಸೂಚ್ಯಾಂಕಗಳ ಮಾಹಿತಿಯನ್ನು ಸಲ್ಲಿಸಿದ್ದು, ಬಾಕಿ ೧೦೭ ಸೂಚ್ಯಾಂಕಗಳ ಮಾಹಿತಿಯನ್ನು ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ನಿಖರವಾದ ಮತ್ತು ಸ್ಪಷ್ಟವಾದ ದತ್ತಾಂಶಗಳುಳ್ಳ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿಗಳಾದ ಸಿ. ಬಿ. ಕುಂಬಾರ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾ ಅಧಿಕಾರಿಗಳಾದ ನಾಗಭೂಷಣ ಮಾಡಗಿ, ತಾಂತ್ರಿಕ ಬೆಂಬಲ ಸಂಸ್ಥೆಯಾದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಸಂಯೋಜಕರಾದ ಪ್ರೊ. ಡಿ. ಎಮ್. ಮದರಿ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿ ಇದ್ದರು.

