ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳಿಂದ ಪ್ರಕರಣ ದಾಖಲು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಫೇಸ್ ಬುಕ್ ನಲ್ಲಿ ಬಸವಣ್ಣನವರು ಮತ್ತು ಅಕ್ಕಮಹಾದೇವಿ ಅವರ ಬಗ್ಗೆ ಅತ್ಯಂತ ಅಶ್ಲೀಲ ಕೀಳುಮಟ್ಟದ ಪದಗಳನ್ನು ಬಳಸುವ ಮನೋರೋಗಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ವಿಜಯಪುರ ಮತ್ತು ಬೆಳಗಾವಿಯಲ್ಲಿ ಸೈಬರ್ ಕ್ರೈಂ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠ ಅಧಿಕಾರಿಗಳಿಗೆ ದೂರು ಸಲ್ಲಿಸಿ ಪ್ರಕರಣ ದಾಖಲಿಸಿದ್ದಾರೆ.
ಎಂ ರಮಾಕಾಂತ ಎಂಬವನು ಫೇಸ್ ಬುಕ್ ನಲ್ಲಿ ಬಸವಣ್ಣನವರು ಮತ್ತು ಅಕ್ಕಮಹಾದೇವಿ ಅವರ ಬಗ್ಗೆ ಅತ್ಯಂತ ಅಶ್ಲೀಲ ಕೀಳುಮಟ್ಟದ ಪದಗಳನ್ನು ಬಳಸಿದ ಕಾರಣ ಅವನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ವಿಜಯಪುರದಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸಿದ್ದಪ್ಪ ಪಡನಾಡ, ಡಾ.ಶಾರದಾಮಣಿ ಹುನಶಾಳ, ರತ್ನತ್ಕ ಬಿರಾದಾರ, ರೇವತಿ ಬಿರಾದಾರ, ಗಂಗಾಧರ ಸಾಲಕ್ಕಿ ಅವರು ಮತ್ತು ಬೆಳಗಾವಿಯಲ್ಲಿ ಡಾ ಶಶಿಕಾಂತ ಪಟ್ಟಣ ಮತ್ತು ಸುಧಾ ಪಾಟೀಲ ಇವರು ಸಂಬಂಧ ಪಟ್ಟ ಅಧಿಕಾರಿಗೆ ತಮ್ಮ ದೂರನ್ನು ದಾಖಲಿಸಿ ಕ್ರಮ ತೆಗೆದುಕೊಳ್ಳಲು ಸರಕಾರವನ್ನು ಒತ್ತಾಯಿಸಿದ್ದಾರೆ.

