ಯೋಜನೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಿಪಂ ಸಿಇಒ ರಿಷಿ ಆನಂದ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಮೃತ ಯೋಜನೆಯಡಿ ಜಿಐಎಸ್ ಆಧಾರಿತ ಮಹಾ ಯೋಜನೆಯ ಕುರಿತು ನಗರಕ್ಕೆ ಹತ್ತಿರವಿರುವ ೯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದರಿಂದ ಗ್ರಾಮ ಪಂಚಾಯತಿಗಳು ಉನ್ನತೀಕರಣಗೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ರಿಷಿ ಆನಂದ ಹೇಳಿದರು.
ಗುರುವಾರ ವಿಜಯಪುರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರ ಅಧ್ಯಕ್ಷತೆಯಲ್ಲಿ ಜಿಲಾ ಪಂಚಾಯತಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು,ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಅಮೃತ ಯೋಜನೆಯಡಿ ಜಿ.ಐ.ಎಸ್ ಆಧಾರಿತ ಮಹಾಯೋಜನೆ-೨೦೪೧ (ಪ-೩), ಸರ್ಕಾರದಿಂದ ತಾತ್ಕಾಲಿಕ ಅನುಮೋದನೆಯಾಗಿರುವುದರಿಂದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಬರುವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಲಹೆ,ಆಕ್ಷೇಪಣೆಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.ಕೇವಲ ೧೦ ವರ್ಷಗಳ ಹಿಂದೆ ನೋಡುವುದಾದರೆ ವಿಜಯಪುರ ನಗರವು ಪ್ರಸ್ತುತ ಬೃಹತ್ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದೆ. ಇದೇ ನಿಟ್ಟಿನಲ್ಲಿ ನಗರದೊಂದಿಗೆ ಗ್ರಾಮ ಪಂಚಾಯತಿಗಳೂ ಸಹ ಅಭಿವೃದ್ದಿ ಹೊಂದಬೇಕು ಎನ್ನುವುದೇ ಈ ಯೋಜನೆಯ ಉದ್ದೇಶವಾಗಿದೆ. ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ ನಿರ್ಮಾಣ, ವಿದ್ಯುತ್ ವ್ಯವಸ್ಥೆ, ಚರಡಿ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಮಾರುಕಟ್ಟೆ ಬೆಳವಣಿಗೆ ಹಾಗೂ ಮುಖ್ಯವಾಗಿ ಹಿಂದುಳಿದ ವರ್ಗಗಳ ಜನಾಂಗಕ್ಕೆ ಈ ಯೋಜನೆ ಹೆಚ್ಚು ಅನುಕೂಲವಾಗಲಿದೆ. ಆದ್ದರಿಂದ ಈ ೯ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ನಗರಾಭಿವೃದ್ಧಿ ಪ್ರಾಧಿಕಾರದೊಂದಿಗೆ ಸಮನ್ವಯ ಸಾಧಿಸಿ, ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಮತ್ತು ಅವಶ್ಯವಿರುವ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ವಿಜಯಪುರ ನಗರದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಒಟ್ಟು ೧೭ ಗ್ರಾಮಗಳನ್ನು ಒಳಗೊಂಡಿದ್ದು, ಸರಕಾರದ ಅಧಿಸೂಚನೆ ದಿನಾಂಕ:೦೫-೦೪-೨೦೧೬ ರಂತೆ ಸ್ಥಳೀಯ ಯೋಜನಾ ಪ್ರದೇಶದ ಒಟ್ಟು ಕ್ಷೇತ್ರ:೫೨೫.೦೦ ಚದರ ಕಿಲೋಮೀಟರ ಗಳಷ್ಟಿದೆ. ಭಾರತ ಸರ್ಕಾರದ ಅಮೃತ ಯೋಜನೆಯಲ್ಲಿ ಮೂಲಭೂತ ನಾಗರಿಕ ಸೌಕರ್ಯಗಳಾದ ನೀರು ಸರಬರಾಜು, ಒಳ ಚರಂಡಿ, ನಗರ ಸಾರಿಗೆ, ಉದ್ಯಾನವನಗಳು, ವಿಶೇಷವಾಗಿ ಬಡವರಿಗೆ ಮತ್ತು ಹಿಂದುಳಿದ ವರ್ಗದವರ ಗುಣಮಟ್ಟ ಸುಧಾರಣೆ ಉದ್ದೇಶದಿಂದ ನಾಗರಿಕರಿಗೆ ಉತ್ತಮ ಸೇವೆ ಒದಗಿಸಲು ಯೋಜಿಸಿ ದೇಶದ ೫೦೦ ನಗರಗಳನ್ನು ಗುರುತಿಸಿದ್ದು, ಕರ್ನಾಟಕ ರಾಜ್ಯದ ೨೬ ನಗರಗಳಲ್ಲಿ ವಿಜಯಪುರ ನಗರವು ಆಯ್ಕೆಯಾಗಿರುತ್ತದೆ ಎಂದರು.
ನಗರದ ಹಾಲಿ ಬೆಳವಣಿಗೆ, ನಿರ್ಮಿತಿಗಳನ್ನು ಆಧರಿಸಿ ಜಿ.ಐ.ಎಸ್ ಆಧಾರಿತ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವ ಕೆಲಸವನ್ನು ಕೈಗೊಂಡಿದ್ದು, ಕೆ.ಎಸ್.ಆರ್.ಎಸ್.ಎ.ಸಿ ಸಂಸ್ಥೆಯಿAದ ಸೆಟ್ಲೈಟ್ ಇಮೇಜ್ ಪಡೆದು ಕಂದಾಯ ಇಲಾಖೆಯ ರೆವಿನ್ಯೂ ಮ್ಯಾಪ್,ಬೇಸ್ ಮ್ಯಾಪ್ನ್ನು ಜಿಯೋಟಿಫ್ ಪಾರ್ಮೇಟ್ ಸ್ಯಾಪ್ಟ್ ಕಾಫಿ ಪಡೆದು ಸನ್ ೨೦೧೭ ರ ಸೆಟ್ ಲೈಟ್ ಇಮೇಜಿನ್ ೦.೬ ಮೀಟರ್ ನಿಖರತೆಯನ್ನು ಅಳವಡಿಸಿ ಬೇಸ್ ಮ್ಯಾಪನ್ನು ತಯಾರಿಸಿಕೊಂಡು ಇಲಾಖೆಗಳಿಂದ ದತ್ತಾಂಶಗಳನ್ನು ಸಂಗ್ರಹಿಸಿ ಹಾಲಿ ನಿರ್ಮಿತಿ-ಕಟ್ಟಡಗಳನ್ನು ಮೊಬೈಲ್ ಅಪ್ಲಿಕೇಶನಗಳ ಮುಖಾಂತರ ಕೆ.ಎಸ್.ಆರ್.ಎಸ್.ಎ.ಸಿ ಸಂಸ್ಥೆಯವರ ಉಪಗ್ರಹ ಚಿತ್ರದ ದತ್ತಾಂಶಗಳನ್ನು ಅಳವಡಿಸಿ ಹಾಲಿ ಬೆಳವಣಿಗೆಯ ಮೂಲ ನಕ್ಷೆ-ಬೇಸ್ ಮ್ಯಾಪನ್ನು ತಯಾರಿಸಲಾಗಿದೆ ಎಂದರು.
ಮಹಾನಗರ ಪಾಲಿಕೆಯ ೩೫ ವಾರ್ಡಗಳ ಜನ ಸಂಖ್ಯೆ ೩,೨೭,೪೨೭ ಹಾಗೂ ೯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ೧೫ ಗ್ರಾಮಗಳ ಜನಸಂಖ್ಯೆ ೬೦,೫೦೮ ಗಳಾಗುತ್ತವೆ. ವಿವಿಧ ವಿಧಾನಗಳ ಹಾಗೂ ಅಂಕಿ ಸಂಖ್ಯೆಗಳ ಪ್ರಕಾರ ೩,೮೭,೯೩೫ ಜನಸಂಖ್ಯೆಯನ್ನು ಸನ್ ೨೦೧೧ ರ ಜನಗಣತಿ ಆಧರಿಸಿಕೊಂಡು ಯೋಜಿತ ಜನಸಂಖ್ಯೆಯನ್ನು ಸನ್ ೨೦೪೧ ನೇ ಸಾಲಿನವರೆಗೆ ೮,೭೫,೦೦೦ ಗಳಾಗಬಹುದೆಂದು ಅಂದಾಜಿಸಿದೆ.
ಹಾಲಿ ನಗರ ಬೆಳವಣಿಗೆ, ಜನಸಂಖ್ಯೆ ಬೆಳವಣಿಗೆ ಪ್ರಮಾಣ ಹಾಗೂ ನಗರ ಬೆಳವಣಿಗೆಯ ಗತಿ ಆಧಾರಿಸಿ ಅಮೃತ ಯೋಜನೆಯ ಅಡಿಯಲ್ಲಿ ತಾಂತ್ರಿಕವಾಗಿ ಹಾಗೂ ಯೋಜನಾಬದ್ಧವಾಗಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ೧೯೬೧ ರ ಕಲಂ: ೧೨ ಮತ್ತು ೧೩ ರ ಕಲಂಗಳAತೆ ವಿಜಯಪುರ ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ, ಜಿ.ಐ.ಎಸ್ ಆಧಾರಿತ ಮಹಾಯೋಜನೆ ನಕ್ಷೆ ತಯಾರಿಸಿದ್ದು,ವಿವಿಧ ಭೂ ಉಪಯೋಗಗಳಲ್ಲಿ ಅಭಿವೃದ್ಧಿಗೊಳ್ಳಬಹುದಾದ ಅಂದಾಜು ಕನರ್ ಬೇಶನ್ ಗಡಿಯಲ್ಲಿ ಬರುವ ಪ್ರದೇಶದ ಕ್ಷೇತ್ರ: ೧೫೫೯೧.೩೦ ಹೆಕ್ಟೇರ ಗಳೆಂದು ಯೋಜಿಸಿ ತಯಾರಿಸಿದ ಪ್ರದೇಶಕ್ಕೆ ಕೆ.ಟಿ.ಸಿ.ಪಿ ಕಾಯ್ದೆಯಂತೆ ತಾತ್ಕಾಲಿಕ ಮಂಜೂರಾತಿಯನ್ನು ಸರಕಾರವು ದಿನಾಂಕ: ೦೨-೦೧-೨೦೨೬ ರಂದು ಹೊರಡಿಸಿರುತ್ತದೆ.
ಅಮೃತ ಯೋಜನೆಯಡಿ ಜಿ.ಐ.ಎಸ್ ಆಧಾರಿತ ತಾತ್ಕಾಲಿಕ ಅನುಮೋದಿತ ಮಹಾಯೋಜನೆ-೨೦೪೧ (ಪ-೩) ರಲ್ಲಿ ಅಭಿವೃದ್ಧಿಗೊಳ್ಳಬಹುದಾದ ಕನರ್ ಬೇಶನ್ ಗಡಿಯ ಪ್ರದೇಶದ ಭೌಗೋಳಿಕ ಸ್ಥಿತಿ-ಗತಿ ಹಾಗೂ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಬಂದಿರುವ ಎಲ್ಲ ಪ್ರಮುಖ ಬೆಳವಣಿಗೆಗಳಾದ ವಸತಿ, ವಾಣಿಜ್ಯ, ಕೈಗಾರಿಕೆ, ಶೈಕ್ಷಣಿಕ ಮೂಲಭೂತ ಸೌಕರ್ಯಗಳಾದ ಸಾರಿಗೆ, ಮುಖ್ಯ ನೀರು ಸರಬರಾಜು ಲೈನಗಳು, ನೆಲ ಮಟ್ಟದ ಹಾಗೂ ಮೇಲ್ಮಟ್ಟದ ಜಲ ಸಂಗ್ರಹಗಾರಗಳು, ಒಳ ಚರಂಡಿ, ಜಲ ಮೂಲಗಳು, ರಾಜ ಕಾಲುವೆಗಳು, ನಾಲೆಗಳು ಘನತ್ಯಾಜ್ಯ-ಎಸ್.ಟಿ.ಪಿ ಘಟಕಗಳು, ಉದ್ಯಾನವನ, ರೈಲ್ವೆ ಇಲಾಖೆ ಬೆಳವಣಿಗೆಗಳು ವಿಮಾನ ನಿಲ್ಯಾಣ, ಇಲಾಖೆ ಬೆಳವಣಿಗೆಗಳು ಜಿಲ್ಲೆಯ ಬೆಳವಣಿಗೆಗೆ ಪೂರಕವಾಗಿರುವ ಇತರೆ ಬೆಳವಣಿಗೆಗಳಾದ ವೈನ್ ಪಾರ್ಕ್ ಪುಡ್ ಪ್ರೋಸೆಸಿಂಗ್ ಯುನಿಟಗಳು, ಕಲ್ಲು ಪುಡಿ ಮಾಡುವ ಘಟಕಗಳು ಹೊಸದಾಗಿ ಬರುತ್ತಿರುವ ಕೈಗಾರಿಕಾ ಬೆಳವಣಿಗೆಗಳನ್ನು ಆಧರಿಸಿ ಅಮೃತ ಯೋಜನೆಯಡಿ ಆಧರಿತ ಅಳವಡಿಸಲಾಗಿದೆ ಎಂದರು.
ಮಹಾಯೋಜನೆ-೨೦೪೧ (ಪ-೧೧೧) ರಲ್ಲಿ ವಸತಿ ಬೆಳವಣಿಗೆ, ವಾಣಿಜ್ಯ ಬೆಳವಣಿಗೆ, ಔದ್ಯೋಗಿಕ ಬೆಳವಣಿಗೆ ಹಾಗೂ ಇತರ ಭೂ ಉಪಯೋಗಗಳ ಬೆಳವಣಿಗೆಗಳಿಗೆ ಪೂರಕವಾಗುವಂತಹ ಕಟ್ಟಡಗಳ ವಲಯ ನಿಯಮಗಳ ಅಂಶಗಳಾದ ನಡುಜಾಗೆಗಳ ನಿರ್ಧರಣೆ, ನಿರ್ಮಿತಿಗಳಿಗೆ ಬೇಕಾಗುವ ಗಾಳಿ, ಬೆಳಕು, ಬೆಂಕಿ ಸುರಕ್ಷತೆ, ಕಟ್ಟಡಗಳ ಭೂ ಕಂಪನ ಸಂರಚನೆ ಸುರಕ್ಷೆಯು ಕಟ್ಟಡ ನಿರ್ಮಿತಿಗಳಿಗೆ-ಅಭಿವೃದ್ಧಿಗೆ ಪೂರಕ ಸೇವೆಗಳನ್ನು ನೀಡಲು ವಲಯ ನಿಯಮಾವಳಿಗಳನ್ನು ಸಹ ರೂಪಿಸಬೇಕಾಗುತ್ತದೆ. ವಿವಿಧ ಬೆಳವಣಿಗೆ-ನಿರ್ಮಿತಿಗಳನ್ನು ಆಯಾ ವಲಯ ಉಪಯೋಗಗಳಂತೆ ರಚಿಸಲು-ಸ್ಥಾಪಿಸಲು ಕಾನೂನಾತ್ಮಕ ನಿಯಮಗಳನ್ನು ಉನ್ನತೀಕರಿಸಲು ನಿಯಮಗಳು ರೂಪಿಸಲ್ಪಡುತ್ತವೆ.
ಅದರಂತೆ,ನಗರ ಪ್ರದೇಶದ ವ್ಯಾಪ್ತಿಯ ನಿರ್ಮಾಣಗಳಿಗೆ ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ನಿರ್ಮಾಣಗಳಿಗೆ ವಿಜಯಪುರ ನಗರದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಅಮೃತ ಯೋಜನೆಯಡಿ ಸರ್ಕಾರದಿಂದ ತಾತ್ಕಾಲಿಕ ಅನುಮೋದನೆಯಾದ ಮಹಾಯೋಜನೆ-೨೦೪೧
(ಪ-೩)ರ ವ್ಯಾಪ್ತಿಯ ವಿವಿಧ ಭೂ-ಉಪಯೋಗಗಳಿಗೆ ಪೂರಕವಾಗಿ ಕರಡು ವಲಯ ನಿಯಮಗಳನ್ನು ರಚಿಸಲಾಗಿದೆ. ಕಟ್ಟಡ ನಡು ಜಾಗೆಗಳು,ಕಟ್ಟಡಗಳ ಆವೃತ್ತಿಗಳು ಹಾಗೂ ಎತ್ತರ ಮತ್ತು ಕಟ್ಟಡಗಳ ಎತ್ತರಕ್ಕೆ ತಕ್ಕಂತೆ ರಸ್ತೆ ಅಗಲಳತೆಗಳು, ಮುಖ್ಯರಸ್ತೆಗಳು, ಕಟ್ಟಡ ರೇಖೆಗಳು, ವಾಹನ ನಿಲುಗಡೆ ಸೌಲಭ್ಯಗಳು ಆಯಾ ವಲಯದ ಕಟ್ಟಡಗಳ ಬೆಳವಣಿಗೆ ನಿಯಂತ್ರಿಸುವ ಕ್ರಮವಾಗುತ್ತದೆ. ಆದುದರಿಂದ ಸರ್ಕಾರದ ಆಶಯದಂತೆ ಭಾರತ ಸರ್ಕಾರದ ಅಮೃತ ಯೋಜನೆಯಡಿ ಜಿ.ಐ.ಎಸ್ ಆಧರಿತ ಮಹಾಯೋಜನೆ-೨೦೪೧ (ಪ-೧೧) ರ ತಯಾರಿಕೆಗೆ ಎಲ್ಲ ಇಲಾಖೆಗಳು ಕೈಗೊಂಡಿರುವ ಪ್ರಮುಖ ಬೆಳವಣಿಗೆಗಳು, ಯೋಜಿತ ಬೆಳವಣಿಗೆಗಳು, ಇಲಾಖಾ ನಿರ್ಮಿತಿಗಳು, ಅಧಿಸೂಚನೆಗಳು, ವಿಶೇಷ ವಲಯಗಳು, ಕೈಗಾರಿಕಾ ವಸಾಹತುಗಳು, ನೀರಾವರಿ ನಾಲೆಗಳು, ಜಲ ಮೂಲಗಳು ಇತ್ಯಾದಿಗಳ ಬಗ್ಗೆ ಪೂರಕ ದಾಖಲಾತಿಗಳೊಂದಿಗೆ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಾಜಶೇಖರ ಡಂಬಳ, ವಿವಿಧ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

