Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಶ್ರಮಯೇವ ಜಯತೆ..

ಕೆಎಸ್ಒಯು ಜೊತೆ ಶೈಕ್ಷಣಿಕ ಒಪ್ಪಂದ :ಡಾ.ಅರುಣ್ ಕುಮಾರ್

ಕೃಷಿ ಮತ್ತು ಉದ್ಯಮಿ ವಲಯಕ್ಕೆ ಹೆಚ್ಚಿನ ಒತ್ತು :ಸಿಇಓ ರಿಷಿ ಆನಂದ್

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾದ ಮಾದಿಗ ಸಮುದಾಯ
(ರಾಜ್ಯ ) ಜಿಲ್ಲೆ

ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾದ ಮಾದಿಗ ಸಮುದಾಯ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಒಳಮೀಸಲಾತಿ ಹಂಚಿಕೆ ಮಾಡಿದ ನಂತರವೇ ನೇಮಕಾತಿ ಭರ್ತಿ ಮಾಡಲು ಆಗ್ರಹ | ಬೆಂಗಳೂರಿನ ಪ್ರತಿಭಟನೆಯಲ್ಲಿ ಭಾಗಿ

ಉದಯರಶ್ಮಿ ದಿನಪತ್ರಿಕೆ

ಹೆಚ್ ಡಿ ಕೋಟೆ: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಹಂಚಿಕೆ ಮಾಡಿದ ನಂತರವೇ ನೇಮಕಾತಿ ಭರ್ತಿ ಮಾಡಬೇಕು ಎಂದು ಬಿಗಿಪಟ್ಟು ಹಿಡಿದಿರುವ ಮಾದಿಗ ಸಮುದಾಯ ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದೆ. ಒಳಮೀಸಲಾತಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆರುವ ನಿಟ್ಟಿನಲ್ಲಿ ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೆಚ್ ಡಿ ಕೋಟೆ ಹಾಗೂ ಸರಗೂರು ತಾಲೂಕಿನ ಮಾದಿಗ ಸಮುದಾಯದ ಮುಖಂಡರು ಸಭೆ ನಡೆಸಿ, ಇಂದು ನಡೆಯಲಿರುವ ಪ್ರತಿಭಟನೆಯಲ್ಲಿ ಎರಡು ತಾಲೂಕಿನ ಮಾದಿಗ ಸಮುದಾಯದ ಜನರು ಭಾಗವಹಿಸಿ, ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಯಿತು.
ಒಳಮೀಸಲಾತಿ ಗೊಂದಲವನ್ನು ಬಗೆಹರಿಸುವರೆಗೂ 56,432 ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಬಾರದು. ವಿಶೇಷ ಸಂಪುಟ ಸಭೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣ ಮಾದರಿಯಲ್ಲೇ ಒಳಮೀಸಲಾತಿ ಸಮರ್ಪಕ ಅನುಷ್ಠಾನದ ನಿರ್ಧಾರ ಕೈಗೊಂಡು ಸಮುದಾಯದಲ್ಲಿ ಮನೆಮಾಡಿರುವ ಆತಂಕ ದೂರಮಾಡಬೇಕು. ಸದ್ಯ ಜಾರಿಗೊಳಿಸಿರುವ ಒಳಮೀಸಲಾತಿಯನ್ನು ಜಾರಿ ಮಾಡಲು ಅಡ್ಡಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ವಿಶ್ವವಿದ್ಯಾಲಯಗಳಲ್ಲಿ ವಿಷಯವರು ನೇಮಕಾತಿ ಕೈಬಿಟ್ಟು ವಿಶ್ವವಿದ್ಯಾಲಯವನ್ನೇ ಒಂದು ಘಟಕವನ್ನಾಗಿ ಪರಿಗಣಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅವಕಾಶ ಕೊಡಬಾರದು. ಒಳಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವರೆಗೂ ಪ್ರತಿಭಟನೆಯಲ್ಲಿ ಭಾಗವಹಿಸುವ ಕುರಿತು ಒಕ್ಕೊರಲ ನಿರ್ಧಾರ ತೆಗೆದುಕೊಳ್ಳಲಾಯಿತು.
ಡಾ.ಬಾಬು ಜಗಜೀವನರಾಂ ವಿಚಾರ ವೇದಿಕೆ ಮಾಜಿ ಅಧ್ಯಕ್ಷ ಪಿ.ನಾಗರಾಜು ಮಾತನಾಡಿ, ಸುಪ್ರೀಂಕೋರ್ಟ್ ಆದೇಶದಂತೆ ಸಾವಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಹಿಂದುಳಿದಿರುವಿಕೆ ಆಧಾರದ ಮೇಲೆ ಒಳ ಮೀಸಲಾತಿ ಜಾರಿಯಾಗಬೇಕು. ಒಳ ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರ ಸ್ಪಷ್ಟ ಕ್ರಮ ಕೈಗೊಳ್ಳದೆ ಲೆಕ್ಕಕ್ಕೆ ಮಾತ್ರ ಒಳ ಮೀಸಲಾತಿ ಜಾರಿ ನಮಗೆ ಬೇಕಾಗಿಲ್ಲ. ಕಾನೂನು ಭದ್ದವಾಗಿ ಸಂವಿಧಾನದ ಅಡಿಯಲ್ಲಿ ಪೂರ್ಣ ಪ್ರವಾಣದ ಒಳ ಮೀಸಲಾತಿ ಜಾರಿ ಮಾಡಬೇಕು. ಈ ನಿಟ್ಟಿನಲ್ಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಪ್ರತಿಭಟನೆಯಲ್ಲಿ ತಾಲೂಕಿನಿಂದ ಸುಮಾರು 1500 ರಿಂದ 2000 ಜನ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಡಿಸಿಸಿ ಪರಶಿವಮೂರ್ತಿ, ಉಡ ನಾಗರಾಜ್, ಬೆಟ್ಟಸ್ವಾಮಿ, ಶಿವಯ್ಯ, ವೆಂಕಟೇಶ್, ಚೆಲುವರಾಜು, ಶಿವರಾಜ್, ಡಿ. ನಾಗರಾಜು, ಶಿವರಾಜ್, ಶಿವಾಜಿ, ಪ್ರಕಾಶ್, ಕೆ.ಟಿ.ಹರೀಶ್, ಸಿ.ಕಾಳಪ್ಪಾಜಿ, ಮಹೇಶ್, ದೇವನಾಥ್, ಮಹೇಂದ್ರ, ಮಹದೇವ, ಸೋಮು, ರಾಮಯ್ಯ, ಚೆನ್ನಪ್ಪ, ಸೇರಿದಂತೆ ಹಲವು ಮುಖಂಡರು, ಯುವಕರು ಉಪಸ್ಥಿತರಿದ್ದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಶ್ರಮಯೇವ ಜಯತೆ..

ಕೆಎಸ್ಒಯು ಜೊತೆ ಶೈಕ್ಷಣಿಕ ಒಪ್ಪಂದ :ಡಾ.ಅರುಣ್ ಕುಮಾರ್

ಕೃಷಿ ಮತ್ತು ಉದ್ಯಮಿ ವಲಯಕ್ಕೆ ಹೆಚ್ಚಿನ ಒತ್ತು :ಸಿಇಓ ರಿಷಿ ಆನಂದ್

ವಿಜಯಪುರ ಜಿಲ್ಲಾ ಬಾಲಭವನದ ಬೇಸಿಗೆ ಶಿಬಿರದ ಸಮಾರೋಪ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಶ್ರಮಯೇವ ಜಯತೆ..
    In ವಿಶೇಷ ಲೇಖನ
  • ಕೆಎಸ್ಒಯು ಜೊತೆ ಶೈಕ್ಷಣಿಕ ಒಪ್ಪಂದ :ಡಾ.ಅರುಣ್ ಕುಮಾರ್
    In (ರಾಜ್ಯ ) ಜಿಲ್ಲೆ
  • ಕೃಷಿ ಮತ್ತು ಉದ್ಯಮಿ ವಲಯಕ್ಕೆ ಹೆಚ್ಚಿನ ಒತ್ತು :ಸಿಇಓ ರಿಷಿ ಆನಂದ್
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲಾ ಬಾಲಭವನದ ಬೇಸಿಗೆ ಶಿಬಿರದ ಸಮಾರೋಪ
    In (ರಾಜ್ಯ ) ಜಿಲ್ಲೆ
  • ಮಲೇರಿಯಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ಮಲೇರಿಯಾ ಕೆಲವೊಮ್ಮೆ ಮಾರಕವಾಗಬಹುದು :ಕೋಳೆಕರ
    In (ರಾಜ್ಯ ) ಜಿಲ್ಲೆ
  • ಶಿಕ್ಷಕರ ಸಂಘಕ್ಕೆ ಮೇ ೧೦ಕ್ಕೆ ಚುನಾವಣೆ :ಅಂದೇ ಫಲಿತಾಂಶ
    In (ರಾಜ್ಯ ) ಜಿಲ್ಲೆ
  • ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ಆದರ್ಶಗಳು
    In ವಿಶೇಷ ಲೇಖನ
  • ಮೇ 4 ರಿಂದ ನೆನಪಿನ ಶಕ್ತಿ ಸಮಸ್ಯೆ ಕುರಿತು ಉಚಿತ ಚಿತ್ಸಾ ಶಿಬಿರ
    In (ರಾಜ್ಯ ) ಜಿಲ್ಲೆ
  • ಜನಿವಾರ ತೆಗೆಸಿದ ಘಟನೆ ಖಂಡಿಸಿ ಸಿಎಂಗೆ ಬ್ರಾಹ್ಮಣ ಮಹಾಸಭಾ ಮನವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.