ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲೂಕಿನ ಕತಕನಹಳ್ಳಿಯ ಮಾತೋಶ್ರೀ ಶಂಕ್ರೆಮ್ಮಾತಾಯಿ ಪ್ರಾಥಮಿಕ ಶಾಲೆಯ ೫ ನೇ ವರ್ಗದ ಒಟ್ಟು ೨೧ ವಿದ್ಯಾರ್ಥಿಗಳು ೨೦೨೫-೨೬ ನೇ ಶೈಕ್ಷಣಿಕ ವರ್ಷದ ಅಖಿಲ ಭಾರತೀಯ ಸೈನಿಕ ಶಾಲೆಯ ಪ್ರವೇಶ ಪೂರ್ವ ಪರೀಕ್ಷೆಗೆ ಕುಳಿತು, ಒಟ್ಟು ೧೪ ವಿದ್ಯಾರ್ಥಿಗಳು ಉತ್ತಮ ಅಂಕಗಳು ಪಡೆದು ಅಮೋಘ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾರ್ಥಿಗಳಾದ ಸದಾಶಿವ ರವಿ ಬಗಲಿ (೨೪೩), ಪ್ರದೀಪ ಸೀತಾರಾಮ ವಿಧಾತೆ (೨೧೪), ಶ್ರೀನಿಧಿ ಭೀಮಾಶಂಕರ ವಾಲಿಕಾರ (೧೯೧), ಭೀಮರಾಯ ಪ್ರಕಾಶ ಬಗಲಿ (೧೮೩), ಗುರುರಾಜ ರಮೇಶ ಕೊಟ್ಯಾಳ (೧೭೨), ವಿನಾಯಕ ಯಲ್ಲಪ್ಪ ಜೈನಾಪೂರ (೧೬೩), ಈ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳು ಪಡೆದು ಸೈನಿಕ ಶಾಲೆಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.
