ಉದಯರಶ್ಮಿ ದಿನಪತ್ರಿಕೆ
ಇಂಡಿ: ರಾಜಕೀಯ ಸೇರಿದಂತೆ ವಿಜ್ಞಾನ ತಂತ್ರಜ್ಞಾನ ಮತ್ತು ಪ್ರತಿ ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ ಎಂದು ತಡವಲಗಾ ಸರಕಾರಿ ಆಸ್ಪತ್ರೆ ವೈದ್ಯಾಥಿಕಾರಿ ಡಾ|| ಶ್ರೀಮತಿ ಕಿರಣ ಗಜಾಕೋಶ ಹೇಳಿದರು.
ಇಂಡಿಯ ಸ್ಟೇಷನ್‌ದ ಸರಕಾರಿ ಶಾಲೆಯಲ್ಲಿ ಆಯೋಜಿಸಿದ ಕೃಷಿವಿಜ್ಞಾನ ಕೇಂದ್ರ ಮತ್ತು ಪ್ಯಾರಾದೀಪ ಪಾಸ್ಪೇಟ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು.
ದಂತ ವೈದ್ಯೆ ಡಾ|| ಅರುಣಾ ಕದಮ ಮಾತನಾಡಿ ಮಹಿಳೆಯರು ಶಾಂತ ಶಕ್ತಿವಂತಳು, ಅವಳು ಪ್ರತಿ ಮನೆಯ ಬೆಳಕು, ಮಕ್ಕಳನ್ನು ಬೆಳೆಸುತ್ತಾಳೆ, ಉದ್ಯೋಗವನ್ನು ನಿರ್ವಹಿಸುತ್ತಾಳೆ, ಅವಳು ಶತಮಾನದ ಸಂಕೋಲೆಯನ್ನು ದಾಟಿ ಮುಂದೆ ಸಾಗಿದ್ದಾಳೆ ಅರ್ಥಿಕ ಸ್ವಾವಲಂಬಿ ಯಾಗಿದ್ದಾಳೆ ಎಂದರು.
ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ವೀಣಾ ಚಂದಾವರಿ, ಪ್ಯಾರಾದೀಪ ಪಾಸ್ಪೇಟ್ ಸಾವಯುವ ಗೊಬ್ಬರದ ಸಂದೀಪ ಬಿರಾದಾರ, ಜೀವ ವಿಮೆಯ ಮಲ್ಲಿಕಾರ್ಜುನ ಕಂಬಳಿ, ಮುಖ್ಯ ಗುರುಗಳು ಹೊಸಮನಿ ಮತ್ತು ಜಹೀದಾ ಹುಂಡೆಕರ ಮಾತನಾಡಿದರು.
ಜೀವ ವಿಮೆಯ ಪ್ರತಿನಿಧಿಗಳು, ಪಾಸ್ಪೇಟ್ ಗೊಬ್ಬರದ ಸಿಬ್ಬಂದಿ ಮತ್ತಿತರಿದ್ದರು.

