ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದಿಂದ ಸುಮಾರು ಮುನ್ನೂರಕ್ಕೂ ಹೆಚ್ಚು ಜನ ಭಕ್ತಾದಿಗಳು ಗ್ರಾಮದಿಂದ ಆಂದ್ರಪ್ರದೇಶದ ಶ್ರೀಶೈಲಂ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ತೆರಳಿದರು.
ಹೋಳಿ ಹುಣ್ಣಿಮೆಯ ಸೋಮವಾರ ರಾತ್ರಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಜಮಾವಣೆಗೊಂಡ ಭಕ್ತಾಧಿಗಳೀಗೆ ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ವಿಶೇಷವಾದ ಕಂಬಿಮಲ್ಲಯ್ಯ ದೇವರಿಗೆ ವಿಶೇಷ ಪೂಜೆ ನೆರವೇರಿದ ನಂತರ ಗ್ರಾಮದ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಮಾರ್ಗವಾಗಿ ಶ್ರೀಶೈಲ ಕ್ಷೇತ್ರಕ್ಕ ಪಾದಯಾತ್ರೆ ನಡೆಸಿದರು, ಗ್ರಾಮಸ್ಥರು ಪಾದಯಾತ್ರಿಗಳಿಗೆ ಹಣ್ಣು, ನೀರು, ಅಲ್ಪೋಪಹಾರ ವಿತರಿಸುವ ಮೂಲಕ ತಮ್ಮ ಭಕ್ತಿಸೇವೆ ಸಲ್ಲಿಸಿದರು.
ಗ್ರಾಮದ ಶ್ರೀ ಭ್ರಮರಾಂಬಾ ಮಲ್ಲಿಕಾರ್ಜುನ ಅನ್ನದಾಸೋಹ ಸೇವಾ ಸಮೀತಿಯಿಂದ ಪ್ರತೀ ವರ್ಷದಂತೆ ಈ ಬಾರಿಯೂ ಈ ಭಾಗದ ಶ್ರೀಶೈಲ ಪಾದಯಾತ್ರಿಗಳಿಗೆ ಉಚಿತ ಅನ್ನದಾಸೋಹ ಹಾಗೂ ವೈದ್ಯಕೀಯ ಸೇವೆ ಮಾ. ೫ (ಗುರುವಾರ) ರಿಂದ ನಿರಂತರವಾಗಿ ಐದು ದಿನಗಳಕಾಲ ಆದ್ರಪ್ರದೇಶದ ಗಡಿ ಬಾಗದ ಕರಿಹೊಳಿ ಹತ್ತಿರ ನಡೆಯುತ್ತದೆ.

