ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹ ನಿರ್ದೇಶಕರು ಹಾಗೂ ಸ್ಥಳೀಯ ಪತ್ರಿಕೆಗಳ ಹಿತ ಚಿಂತಕರಾದ ಅಮರೇಶ ದೊಡಮನಿಯವರಿಗೆ ’ಉದಯರಶ್ಮಿ’ ದಿನಪತ್ರಿಕೆ ವತಿಯಿಂದ ಸೋಮವಾರ ಆದರಪೂರ್ವಕವಾಗಿ ಸನ್ಮಾನಿಸಲಾಯಿತು.
’ಉದಯರಶ್ಮಿ’ ಸಂಪಾದಕ ಇಂದುಶೇಖರ ಮಣೂರ ಮತ್ತು ಪ್ರಕಾಶಕಿ ಶ್ರೀಮತಿ ಶೈಲಾ ಇಂದುಶೇಖರ ಅವರು ವಾರ್ತಾಧಿಕಾರಿ ಅಮರೇಶ ದೊಡಮನಿ ಅವರ ಪಾರದರ್ಶಕ ವ್ಯಕ್ತಿತ್ವ ಮತ್ತು ಕರ್ತವ್ಯದಕ್ಷತೆಗೆ ಅಭಿನಂದನೆ ಸಲ್ಲಿಸಿ ಗೌರವಿಸಿದರು.
ಈ ವೇಳೆ ವಾರ್ತಾಧಿಕಾರಿ ಅಮರೇಶ ದೊಡಮನಿ ಅವರು ಮಾತನಾಡಿ, ’ಉದಯರಶ್ಮಿ’ ಪತ್ರಿಕೆಯ ಗುಣಮಟ್ಟದ ಬಗ್ಗೆ ಮೆಚ್ಚುಗೆ ಸೂಚಿಸಿ, ಪತ್ರಿಕೆಯ ಬೆಳವಣಿಗೆಗೆ ಸಹಕರಿಸುವುದಾಗಿ ಭರವಸೆ ನೀಡಿದರಲ್ಲದೆ, ಪತ್ರಿಕಾ ಧರ್ಮ ಪಾಲನೆ ಕೈಬಿಡದಂತೆ ಸಂಪಾದಕರಿಗೆ ಕಿವಿಮಾತು ಹೇಳಿದರು.

