ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಇಂದಿನ ತಾಯಂದಿರು ಸಹ ಜೀಜಾಮಾತಾ ಅವರಂತೆ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ನೀಡಿ, ದೇಚಶಭಕ್ತಿ, ಧೈರ್ಯ, ಶೌರ್ಯ, ಸಾಹಸ ಮನೋಭಾವವನ್ನು ಬೆಳೆಸಿ, ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಪ್ರಯತ್ನಿಸಬೇಕು ಎಂದು ಮರಾಠಾ ಸಮಾಜದ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಅಂಬಾಭವಾನಿ ಜಾತ್ರಾ ಮಹೋತ್ಸವಯು ನಾಲ್ಕನೇ ದಿನ ಧರ್ಮಸಭೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿ, ಅವರು ನಾಲ್ಕು ದಿನಗಳ ಕಾಲ ಅತಿ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೀರಿ ತಾಯಿ ಭವಾನಿ ಮಾತಾ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಆರ್ಶೀವಚನ ನೀಡಿದರು.
ಶಿವಾಜಿ ಮಹಾರಾಜರು ಧೀರ ಮತ್ತು ಪರಾಕ್ರಮಿ ಆಗಿದ್ದರು. ಅವರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಭಾರತವೇ ತನ್ನ ದೇಶ, ಭಾರತೀಯರೆಲ್ಲರೂ ತನ್ನವರು ಎಂಬ ಭಾವ ಹೊಂದಿದ್ದರು ಶಿವಾಜಿ ಮಹಾರಾಜರಂತೆ ನಮ್ಮ ದೇಶದ ಯುವಕರಲ್ಲಿ ಧೈರ್ಯ, ಸ್ಥೈರ್ಯ ಬೆಳೆಸಬೇಕಿದೆ. ಶಿವಾಜಿ ಅವರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ತಿಳಿಸಿ ಯುವಕರಲ್ಲಿ ರಾಷ್ಟ್ರಾಭಿಮಾನ ಮೂಡಿಸಬೇಕು ಎಂದು ಬಿ.ಡಿ.ಸಿ.ಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮೋಹನ್ ಜಾಧವ
ಹೇಳಿದರು.
ಇದೇ ಸಂದರ್ಭದಲ್ಲಿ ಪಿ.ಕೆ.ಪಿ.ಎಸ್ ಹೊಸದು ಅಧ್ಯಕ್ಷ ಸುಶೀಲ್ ಕುಮಾರ್ ಬೆಳಗಲಿ, ಸಾವಳಗಿ ಪಿಎಸ್ಐ ಅಪ್ಪಣ್ಣ ಐಗಳಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಅರ್ಬನ್ ಬ್ಯಾಂಕ್ ನಿರ್ದೇಶಕ ಎ ಆರ್ ಶಿಂಧೆ, ಸುನೀಲ ಶಿಂಧೆ, ಬಸವರಾಜ ಪರಮಗೌಡ, ಸುಭಾಷ್ ಪಾಟೋಳ್ಳಿ, ಉಮೇಶ್ ಜಾಧವ ಹಾಗೂ ಇನ್ನಿತರು ಉಪಸ್ಥಿತರಿದ್ದರು.
“ನಾನು ಶಾಸಕ ಆಗಿದ್ದ ಸಂದರ್ಭದಲ್ಲಿ ಮರಾಠ ಸಮಾಜಕ್ಕೆ ಅನುದಾನ ಕೊಟ್ಟಿದ್ದೇನೆ, ಸಮುದಾಯದ ಭವನ ಅರ್ಧಕ್ಕೆ ನಿಂತಿದೆ ಎಂದು ಗೋತ್ತಾಗಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಈ ಮರಾಠಾ ಸಮುದಾಯದ ಭವನಕ್ಕೆ 1 ಕೋಟಿ ಅನುದಾನ ಕೋಡಬೇಕು ಅಂತ ಮನವಿ ಮಾಡಿಕೊಂಡಾಗ ಅವರು ಮುಂಜೂರು ಮಾಡಿದರು, ಅನುದಾನ ಏನಾಗಿದೆ ಎಂಬುದನ್ನು ಪರಿಶೀಲಿಸಿ ಆ 1 ಕೋಟಿ ಅನುದಾನ ಕೋಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ಸಮುದಾಯದ ಭವನ ಪೂರ್ಣ ಮಾಡೋಣ.”
– ಆನಂದ ನ್ಯಾಮಗೌಡ
ಮಾಜಿ ಶಾಸಕರು, ಜಮಖಂಡಿ

